Home ಧಾರ್ಮಿಕ ಸುದ್ದಿ ಭಜನೆ ಸಂಸ್ಕೃತಿ ಉಳಿವಿಗೆ ಟ್ರಸ್ಟ್‌ ಮಾದರಿ ಚಟುವಟಿಕೆ: ಆಸ್ರಣ್ಣ

ಭಜನೆ ಸಂಸ್ಕೃತಿ ಉಳಿವಿಗೆ ಟ್ರಸ್ಟ್‌ ಮಾದರಿ ಚಟುವಟಿಕೆ: ಆಸ್ರಣ್ಣ

ಕಾಟುಕುಕ್ಕೆ ಭಜನ ಚಾರಿಟೆಬಲ್ ಟ್ರಸ್ಟ್‌ ಪುತ್ತೂರು

1548
0
SHARE

ಪೆರ್ಲ: ಹರಿದಾಸ ಸಾಹಿತ್ಯದ ಸಾರ-ಸಂದೇಶಗಳನ್ನು ಭಜನೆಯ ಮೂಲಕ ಮನೆಮನೆಯಲ್ಲಿ ಮತ್ತೆ ಅನುರಣಿಸುವಂತೆ ಮಾಡುವ ಮೂಲೋದ್ದೇಶದೊಂದಿಗೆ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್‌ ಪುತ್ತೂರು ಅಸ್ತಿತ್ವಕ್ಕೆ ಬಂದಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ನಡೆದ ಸಮಾರಂಭ ದಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ಕಮಲಾ ದೇವಿ ಪ್ರಸಾದ ಆಸ್ರಣ್ಣ ದೀಪಬೆಳಗಿಸಿ ಟ್ರಸ್ಟ್‌ ಉದ್ಘಾ ಟಿಸಿ ಭಜನೆಯ ಮೂಲಕ ಮಹಿಳಾ ಸಂಘ ಟನೆ ಹಾಗೂ ಮೌಲ್ಯಗಳ ಬಿತ್ತನೆಯಿಂದ ಸತ್ಸಮಾಜ, ಸಂಸ್ಕೃತಿ ರೂಪಿಸುವ ನಿಟ್ಟಿನಲ್ಲಿ ಟ್ರಸ್ಟ್‌ ರಚನೆಯಾಗಿರುವುದು ಶ್ಲಾಘನೀಯ. ರಾಮಕೃಷ್ಣ ಅವರು ತನ್ನ ಶಿಷ್ಯ ಬಳಗದ ನೂರು ಭಜನ ಮಂಡಳಿಗಳನ್ನು ಒಟ್ಟು ಮಾಡಿ ಟ್ರಸ್ಟ್‌ ರೂಪಿಸಿರುವುದು ಭಜನ ಕ್ರಾಂತಿಯ ಮಾದರಿ ಚಟುವಟಕೆ. ಇಂಥ ಸಮಾರಂಭದಲ್ಲಿ ಪಾಲ್ಗೊಳ್ಳುವುದೇ ಧನ್ಯತೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಂಸದ ನಳಿನ್‌ ಕುಮಾರ್‌ ಕಟೀಲ್ ಮಾತನಾಡಿ ಭಜನೆ ಎಂಬುದು ಒಂದು ಸಂಸ್ಕಾರ. ಅದು ಮನ, ಮನೆಯಲ್ಲಿ ಹಿಂದೆ ಇದ್ದು, ಈಗ ಇಲ್ಲವಾಗುತ್ತದೆ. ಪರಿಣಾಮ ನೈತಿಕ ಅಧಃಪತನದಿಂದ ಅನಾಗರಿಕ ಸಮಾಜ ನಿರ್ಮಾಣವಾಗುತ್ತಿದೆ. ಮನುಷ್ಯ ಬದುಕಿನ ಪರಿವರ್ತನೆಗೆ ಭಜನೆಯಿಂದ ಸಾಧ್ಯವಿದೆ. ಇದನ್ನರಿತು ರಾಮಕೃಷ್ಣ ಕಾಟುಕುಕ್ಕೆ ಅವರು ಭಜನೆಗಾಗಿ ಪ್ರಪ್ರಥಮ ಟ್ರಸ್ಟ್‌ ರೂಪಿಸಿರುವುದು ಕ್ರಾಂತಿಕಾರಕ ಕೆಲಸ. ಅವರು ಅಭಿನಂದನೀಯರು. ಕೇವಲ ಭಜನೆಯನ್ನು ಹಾಡುವುದಷ್ಟೇ ಅಲ್ಲದೇ, ದಾಸ ಸಾಹಿತ್ಯದ ಅರ್ಥ, ಸಂದೇಶಗಳನ್ನರಿತರೆ ಆತ್ಮವಿಕಾಸದ ಜತೆ ಜೀವನದ ಉನ್ನತಿಯೂ ಸಾಧ್ಯ. ವರ್ತಮಾನದ ಸಾಮಾಜಿಕ ಬದುಕಿನಲ್ಲಿ ಮೌಲ್ಯಗಳನ್ನು ಬಿತ್ತುವ ಇಂತಹ ಆಧ್ಯಾತ್ಮಿಕ ಚಟುವಟಿಕೆಗಳು ಅತ್ಯಗತ್ಯದ ಕಾಯಕ ಎಂದವರು ನುಡಿದರು.

ಹನುಮಗಿರಿ ಶ್ರೀ ರಾಮಾಂಜನೇಯ ದೇವಳದ ಅಧ್ಯಕ್ಷ ನನ್ಯ ಅಚ್ಯುತ ಮೂಡಿ ತ್ತಾಯ ಅಧ್ಯಕ್ಷತೆ ವಹಿಸಿದರು. ಕಾಟುಕುಕ್ಕೆ ಭಜನ ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ರಾಮ ಕೃಷ್ಣ ಕಾಟುಕುಕ್ಕೆ ಪ್ರಾಸ್ತಾವಿಕ ಮಾತನಾಡಿ ದರು. ದ.ಕ.ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ನಾರಂಪಾಡಿ ಉಮಾಮಹೇಶ್ವರ ದೇವಳದ ಉಪಾಧ್ಯಕ್ಷ ಮಧುಕರ ರೈ ಕೊರೆಕ್ಕಾನ, ಮುಂಬೈ ಉದ್ಯಮಿ ಕುಕ್ಕಂದೂರು ಚಂದ್ರಶೇಖರ ಶೆಟ್ಟಿ, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡರು. ಶ್ರೀ ಕ್ಷೇತ್ರ ಧರ್ಮಸ್ಥಳ ಭಜನ ಪರಿಷತ್‌ ಕಾರ್ಯದರ್ಶಿ, ಟ್ರಸ್ಟ್‌ ಉಪಾಧ್ಯಕ್ಷ ಜಯರಾಮ ನೆಲ್ಲಿತ್ತಾಯ ಸ್ವಾಗತಿಸಿ, ಪತ್ರಕರ್ತ ಎಂ.ನಾ. ಚಂಬಲ್ತಿಮಾರ್‌ ಕಾರ್ಯಕ್ರಮ ನಿರೂಪಿಸಿದರು. ಉಷಾ ಶಿವರಾಂ ಭಟ್ ಕಾರಿಂಜ ವಂದಿಸಿದರು. ಟ್ರಸ್ಟ್‌ ಉದ್ಘಾಟನೆ ಅಂಗವಾಗಿ ಬೆಳಗ್ಗೆ ಗಾಯಕ ಕಿಶೋರ್‌ ಪೆರ್ಲ ಅವರಿಂದ ದೇವರ ನಾಮಾವಳಿಗಳ ಸಂಕೀರ್ತನೆ ನಡೆಯಿತು.

LEAVE A REPLY

Please enter your comment!
Please enter your name here