Home ಧಾರ್ಮಿಕ ಸುದ್ದಿ “ಹಿಂದೂ ಧರ್ಮದ ಸಿದ್ಧಾಂತ ಅಳವಡಿಸಿಕೊಂಡರೆ ನೆಮ್ಮದಿಯ ಬಾಳ್ವೆ ಸಾಧ್ಯ’

“ಹಿಂದೂ ಧರ್ಮದ ಸಿದ್ಧಾಂತ ಅಳವಡಿಸಿಕೊಂಡರೆ ನೆಮ್ಮದಿಯ ಬಾಳ್ವೆ ಸಾಧ್ಯ’

ಕಾಟುಕುಕ್ಕೆ ಸುಬ್ರಾಯ ದೇವಸ್ಥಾನ: ಅಖಂಡ ಭಜನೆ,ಧಾರ್ಮಿಕ ಸಭೆ

1066
0
SHARE

ಪೆರ್ಲ :ಭಗವಂತನನ್ನು ಆರಾಧಿಸುವ ಶ್ರೇಷ್ಠ ಸಂಸ್ಕೃತಿ,ಧಾರ್ಮಿಕತೆ ತುಂಬಿ ತುಳುಕಾಡುವ ಭಾರತವು ಜಗತ್ತಿನ ದೇವರ ಕೋಣೆಯಾಗಿದೆ.ಸನಾತನ ಹಿಂದೂ ಧರ್ಮದಲ್ಲಿ ಹೇಳಲಾಗುವ ಪ್ರತಿಯೊಂದು ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿದರೆ ಸಮಸ್ತ ಜಗತ್ತಿನ ಮಾನವ ಕುಲಕ್ಕೆ ಸಾತ್ವಿಕ ಮತ್ತು ಸುಖ ಜೀವನ ದೊರೆಯಲಿದೆ ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಇತಿಹಾಸ ಪ್ರಸಿದ್ಧ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯೇಶ್ವರ ಪ್ರಸಾದಿತ ಭಜನಾ ಸಂಘದ 75ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಅಖಂಡ ಭಜನೆ, ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಉತ್ತಮ ಚಿಂತನೆ,ಧಾರ್ಮಿಕ ಮನೋಭಾವಗಳು ಮನುಷ್ಯನ ಬದುಕನ್ನು ರೂಪೀಕರಿಸುತ್ತದೆ.ದೇವ ಸ್ಮರಣೆ,ಭಜನೆ,ಸತ್ಸಂಗಗಳಲ್ಲಿ ಭಾಗವಹಿಸದೆ ಆಲಸ್ಯ ಜೀವನ ಇದ್ದರೆ ಅದು ದುಷ್ಟ ನಡೆತೆಗಳಿಗೆ ದಾರಿ ಮಾಡುತ್ತದೆ.ಚಿತೆ ನಿರ್ಜೀವ ಶರೀರವನ್ನು ಸುಟ್ಟರೆ ಚಿಂತೆ ಜೀವಂತ ಶರೀರವನ್ನೇ ಸುಡುವುದು.ಭೂತಕಾಲದ ಚಿಂತೆಯಿಂದ ವರ್ತಮಾನ ಕಾಲ,ಭವಿಷ್ಯವನ್ನು ಹಾಳು ಮಾಡುತ್ತಿದ್ದೇವೆ.ನಂಬಿದರೆ ಕಲ್ಲೂ ದೇವರಾಗುವುದು.ಭಕ್ತಿ ಶ್ರದ್ಧೆ ಇಲ್ಲದಿದ್ದರೆ ದೇವರೂ ಕಲ್ಲಾಗುವನು.ಕುಳಿತು ಭಜಿಸಿದಾಗ ನಿಂತು ಕೇಳುವ ದೇವರು,ನಿಂತು ಭಜಿಸಿದಾಗ ಕುಣಿದು ಕೇಳಿಸುತ್ತಾನೆ.ಕುಣಿದಾಡಿ ಭಜಿಸಿದಾಗ ಒಲಿಯತ್ತಾನೆ. ವಿವೇಕ, ಬುದ್ಧಿಶಕ್ತಿಯಿಂದ ಜೀವನದ ಗುರಿ ಏನು ಎಂಬುದನ್ನು ಅರಿಯುವ ಸಾಮರ್ಥ್ಯ ಹೊಂದಿರುವ ಒಂದೇ ಒಂದು ಜನ್ಮ ಮನುಷ್ಯ ಜನ್ಮ.ಭಗವಂತ ನೀಡಿದ ಶರೀರವನ್ನು ಭಗವತ್‌ ಕಾರ್ಯಗಳಲ್ಲಿ ತೊಡಗಿಸಿಕೊಂಡಲ್ಲಿ ಜೀವನದ ಪಾಪ ಕರ್ಮಗಳು ಕರಗುವುದು.ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುವುದು.ಶುದ್ಧ ಹೃದಯದ ಚಿಂತನೆ, ದೇವರ ನಿತ್ಯ ಸ್ಮರಣೆಯಿಂದ ಆಂತರ್ಯದ ಕಷ್ಮಲಗಳು ನೀಗುವುದು. ಶರಣಾರ ಬಾಳನ್ನು ಮರಣದಲ್ಲಿ ಕಾಣು ಎಂಬಂತೆ ನಾಲ್ಕು ಜನರಿಗೆ ಉಪಕಾರಿಯಾಗಿ ಬಾಳಿದರೆ ಇತರರು ನಮ್ಮನ್ನು ಚಿರಕಾಲ ಸ್ಮರಿಸುತ್ತಾರೆ ಎಂದಾದರೆ ಅದರಷ್ಟು ಪುಣ್ಯ ಬೇರೊಂದಿಲ್ಲ ಎಂದರು.

ಪರಶುರಾಮ ಸೃಷ್ಟಿ ,ದೇವರ ನಾಡು,ಪುಣ್ಯ ನೆಲದ ಆರಾಧನಾ ಪರಂಪರೆಯಿಂದ ಯಾವುದೇ ಅನಾಹುತಗಳು, ಪ್ರಕೃತಿ ವಿಕೋಪಗಳು ಸಂಭವಿಸಿಲ್ಲ.ರಾಮಾಯಣ ಮಹಾಭಾರತ ವೇದಾಂತ,ಋಷಿ ಮುನಿಗಳ ಜೀವನ ಕಥೆಗಳಿಂದ ಜನರ ಆಂತರ್ಯದಲ್ಲಿ ಭಕ್ತಿ ಜಾಗೃತವಾಗಿದೆ. ದೇವರನ್ನು ಹೃದಯದಲ್ಲಿರಿಸಿ ಪೂಜಿಸಬೇಕು.ದೇವರ ಕೃಪೆ, ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿಯಿಂದ ಭಜನಾ ಸಂಘ 75 ಸಂವತ್ಸರ ದಾಟಿದೆ. ಇದು ಅಭಿನಂದನೀಯವಾಗಿದೆ.ಮನೆ ಮನೆಗಳಲ್ಲಿ ಭಜನೆಗಳು ನಡೆಯಲು ಅಖಂಡ ಭಜನೆ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದು ಹರಿದಾಸ ದೀಕ್ಷೆ ಪಡೆದ ಮಧ್ವಾಧೀಶ ವಿಠಲದಾಸ(ರಾಮಕೃಷ್ಣ ಕಾಟುಕುಕ್ಕೆ) ಹೇಳಿದರು.

ದೇಗುಲದ ಮಾಜಿ ಆಡಳಿತ ಮೊಕ್ತಸರ ವಿಷ್ಣುಪ್ರಸಾದ್‌ ಪಿಲಿಂಗಲ್ಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಆರಾಧನೆಗೆ ಜಾತಿ ಭೇದ ಭಾವಗಳಿಲ್ಲ .ಯಾರೀಗೂ ಭಗವಂತನ್ನು ಭಜಿಸ ಬಹುದು. ಸರಳ ರೀತಿಯ ಆರಾಧನೆ ಭಜನೆ. ವಿಷ್ಣು ಸಹಸ್ರನಾಮ ಪಠಿಸುವುದರಿಂದ ಎಲ್ಲಾ ರೀತಿಯ ಪುಣ್ಯ ಪ್ರಾಪ್ತಿಯಾಗುವುದು ಎಂದರು.

ಉದ್ಯಮಿ ರಾಮಪ್ರಸಾದ್‌, ನಿವೃತ್ತ ಶಿಕ್ಷಕ ಗಂಗಾಧರ ರೈ ಪಡ್ಡಂಬೆ„ಲುಗುತ್ತು, ಮುಂಬಯಿ ಉದ್ಯಮಿ ರಾಧಾಕೃಷ್ಣ ರೈ. ಪಡ್ಡಂಬೈಲುಗುತ್ತು ಮಾತನಾಡಿದರು. ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣನ್‌, ಭಜನಾ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ ಮಾಯಿಲಂಗಿ ಉಪಸ್ಥಿತರಿದ್ದರು.ಉಮಾ ರಾವ್‌, ಅರುಣಲತಾ
ಪಡು³ ಪ್ರಾರ್ಥನೆ ಹಾಡಿದರು. ದೀಪಕ್‌ ಭಂಡಾರದ ಮನೆ ಸ್ವಾಗತಿಸಿದರು.ಚೇತನಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here