ಕಲ್ಮಡ್ಕ : ಮರಕ್ಕಡ ಪೆರಿಯಪ್ಪು ಮಜಲಿನಲ್ಲಿ ಗ್ರಾಮ ದೈವ ನೆಲ್ಲೂರಾಯ ನೇಮ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಬೊಳಿಯೂರಿನಲ್ಲಿ ದೈವಗಳ ಭಂಡಾರ ಹಿಡಿದು ಪೆರಿಯಪ್ಪು ಮಜಲಿನಲ್ಲಿ ದಾರು-ಕುಂದಯ ದೈವದ ನೇಮ ಮತ್ತು ಗ್ರಾಮ ದೈವ ನೆಲ್ಲೂರಾಯ
ನೇಮ ನಡೆಯಿತು. ನೇಮದ ಅಂಗವಾಗಿ ಕಾಂಚಿನಗರ ಶೃಂಗೇರಿಯ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘದವರಿಂದ ಸಂಗೀತ ರಸಮಂಜರಿ ನಡೆಯಿತು. ಗಂಗಾಧರ ಗೌಡ ಮರಕ್ಕಡ ಮತ್ತು ಬಾಲಕೃಷ್ಣ ಗೌಡ ಮೂಲೆಮನೆ ಇವರ ನೇತೃತ್ವದಲ್ಲಿ ನಡೆದ ನೇಮ ನಡೆಯಿತು.