ಕುಂಬಳೆ : ಸರ್ಪಾದಷ್ಟಕುಲ ನಾಗದೇವರ ಮಹೋತ್ಸವ ಅಷ್ಟಪವಿತ್ರ ನಾಗಮಂಡಲೋತ್ಸವದಿಂದ ನಾಡಿಗೆ ಮಂಗಲವಾಗುವುದು. ನಾಗ ಕಣ್ಣಿಗೆ ಕಾಣುವ ಪತ್ಯಕ್ಷ ದೇವರು. ನಾಗ ದೇವರ ಆರಾಧನೆಯಿಂದ ಸಕಲ ಐಶ್ವರ್ಯ ಪ್ರಾಪ್ತಿಯಾಗುವುದು ಎಂಬುದಾಗಿ ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಲೋಕಲ್ಯಾಣಾರ್ಥ ಮಂಗಲ್ಪಾಡಿ ಪೆರಿಂಗಡಿ ಶ್ರೀ ಶಾಸ್ತಾರೇಶ್ವರ ಕ್ಷೇತ್ರದಲ್ಲಿ ಸರ್ಪಾದಷ್ಟಕುಲ ನಾಗದೇವರ ಮಹೋತ್ಸವ ಅಷ್ಟಪವಿತ್ರ ನಾಗಮಂಡಲೋತ್ಸವದ ಕೊನೆಯ ದಿನವಾದ ಮಾ. 6 ರಂದು ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀವರ್ಚನ ನೀಡಿದರು.
ಮಾಣಿಲ ಶ್ರೀ ಧಾಮದ ಯೋಗಿಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ನಾಗ ಸಮೃದ್ಧಿಯ ಸಂಕೇತ. ನಾಗದೇವರ ಆರಧಾನೆಯಿಂದ ಭಕ್ತರಿಗೆ ಮತ್ತು ನಾಡಿಗೆ ಕ್ಷೇಮವಾಗುವುದು. ಹಬ್ಬದ ಆಚಾರಣೆಯ ಮೂಲ ತಿಳಿದು ಹಬ್ಬವನ್ನು ಆಚರಿಸಬೇಕೆಂದರು.
ಉತ್ತರ ಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರ ಸ್ವಾಮೀಜಿಯವರು ತಮ್ಮ ಆಶೀರ್ಚಚನ ನುಡಿಯಲ್ಲಿ ಸಂಸ್ಕಾರ,ಸಂಸ್ಕೃತಿ ಮತ್ತು ಸಂಸ್ಕೃತ ಈ ಮೂರು ಸಕಾರಗಳಿಂದ ಭಾರತ ವಿಶ್ವಮಾನ್ಯವಾಗಿದೆ ಎಂದರು.
ಕೊಂಡೆವೂರು ಶ್ರೀ ನಿತ್ಯಾನಂದ ಆಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿ ಜಿಲ್ಲೆಯ ಅಪೂರ್ವ ಕಾರ್ಯಕ್ರಮವಾದ ನಾಗಮಂಡಲೋತ್ಸವ ಸರ್ವ ಭಕ್ತರ ಸಹಕಾರದಿಂದ ಯಶಸ್ವಿಯಾಗಿ ಜರಗಿದೆ ಎಂದರು.
ನಾಗಮಂಡಲೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ. ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದರು. ವಿದ್ವಾನ್ ವಿ.ಬಿ. ಹಿರಣ್ಯ ಧಾರ್ಮಿಕ ಉಪನ್ಯಾಸವಿತ್ತರು. ನಾಗಪಾತ್ರಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರು ಉಪಸ್ಥಿತರಿದ್ದರು. ಪ್ರಮುಖರಾದ ಬಿ. ರಘುನಾಧ ಸೋಮಯಾಜಿ, ಸಂಜೀವ ಶೆಟ್ಟಿ ಮುಂಬಯಿ, ಡಾ| ಬಿ.ಎಸ್. ರಾವ್ ಕಾಸರಗೋಡು, ಡಾ| ಅನಂತ
ಕಾಮತ್ ಕಾಸರಗೋಡು, ದೇರಂಬಳ ಕೃಷ್ಣಪ್ಪ ಪೂಜಾರಿ, ಲಯನ್ ರಾಧಾಕೃಷ್ಣ ಹೊಳ್ಳ ಬೆಂಗಳೂರು, ಮಾಧವ ಭಟ್ ಪೊಳಲಿ, ಕರುಣಾಕರ ಬೆಳ್ಚಪ್ಪಾಡ, ರಾಧಕೃಷ್ಣ ಶೆಟ್ಟಿ ಚೆಲಡ್ಕ, ಡಾ| ಸುರೇಶ್ ಮಯ್ಯ ಉಪಸ್ಥಿತರಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ಡಾ| ಎಂ. ಶ್ರೀಧರ ಭಟ್ ಸ್ವಾಗತಿಸಿದರು. ಸಂಚಾಲಕಿ ಮೀರಾ ಆಳ್ವ ವಂದಿಸಿದರು. ಅಷ್ಟಪವಿತ್ರ ನಾಗ ಮಂಡಲೋತ್ಸವ ಕಾರ್ಯಕ್ರಮವು ಬ್ರಹ್ಮಶ್ರೀ ಬಂಬ್ರಾಣ ಶಂಕರನಾರಾಯಣ ಕಡಮಣ್ಣಾಯ ತಂತ್ರಿವರ್ಯರ ಪೌರೋಹಿತ್ಯದಲ್ಲಿ ನಾಗಪಾತ್ರಿ ಸಗ್ರಿ ಶ್ರೀ ಗೋಪಾಲ ಕೃಷ್ಣ ಸಾಮಗರು ಮತ್ತು ಮದ್ದೂರು ಶ್ರೀ ಬಾಲಕೃಷ್ಣ ವೈದ್ಯರ ಬಳಗದಿಂದ ಕಳೆದ ಮಾ. 2ರಂದು ಆರಂಭಗೊಂಡು ವೈದಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಮಾ.6 ರಂದು ಸಂಜೆ ಜರಗಿದ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಬಿ. ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ವಿಧಾನ ಪರಿಷತ್ ಮುಖ್ಯಸಚೇತಕ ಗಣೇಶ್ ಕಾರ್ಣಿಕ್, ಪ್ರಮುಖರಾದ ಚಂದ್ರಪ್ರಸಾದ್ ಶೆಟ್ಟಿ ತುಂಬೆ,ಕುಸುಮೋದರ ಶೆಟ್ಟಿ ಚೆಲ್ಲಡ್ಕ,ಅಣ್ಣಿ ಸಿ. ಶೆಟ್ಟಿ, ಬಿ. ರಘುನಾಥ ಸೋಮಯಾಜಿ, ಕುಂಟಾರು ರವೀಶ ತಂತ್ರಿ,ಸಂಜೀವ ಶೆಟ್ಟಿ, ನ್ಯಾಯವಾದಿ ಮೋನಪ್ಪ ಭಂಡಾರಿ, ಡಾ| ಬಿ.ಎಸ್. ರಾವ್, ಡಾ| ಅನಂತ ಕಾಮತ್, ಅಂಗಾರ ಶ್ರೀಪಾದ ಅತಿಥಿಗಳಾಗಿ ಭಾಗವಹಿಸಿದರು.
ವೈ. ಸದಾರಾಮ ಹೆರ್ಲೆ, ಉಮೇಶ್ ಶೆಟ್ಟಿ ಕೊಲ್ಯ, ಡಾ| ಕೆ.ಪಿ. ಹೊಳ್ಳ, ಡಿ. ಕೃಷ್ಣಪ್ಪ ಪೂಜಾರಿ, ರಾಧಾಕೃಷ್ಣ ಹೊಳ್ಳ ಬೆಂಗಳೂರು, ಮಾಧವ ಭಟ್ ಪೊಳಲಿ, ಪುಷ್ಪಾ ವಿಶ್ವನಾಥ ಪೂಜಾರಿ, ನಾರಾಯಣ ಭಟ್ ಪೊಳಲಿ ಉಪಸ್ಥಿತರಿರುವರು.
ಕಾಸರಗೋಡು ಜಿಲ್ಲೆಯ ಅಪೂರ್ವ ಕಾರ್ಯಕ್ರಮದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ರಾತ್ರಿ 10ರಿಂದ ಅಷ್ಟಪವಿತ್ರ ನಾಗಮಂಡಲೋತ್ಸವ, ಮಂತ್ರಾಕ್ಷತೆ, ಸಿರಿಮುಡಿ ಗಂಧಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.