ವೇಣೂರು : ಸಾಮೂಹಿಕ ಶ್ರೀ ಪೂಜಾ ಸಮಿತಿ ಹೊಸಂಗಡಿ-ಬಡಕೋಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಒಕ್ಕೂಟಗಳು, ಜನಜಾಗೃತಿ ಗ್ರಾಮ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಮೇ 21ರಂದು ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಸಂತೃಪ್ತಿ ಸಭಾಭವನದಲ್ಲಿ ಜರಗಿತು.
ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಆನುವಂಶೀಯ ಆಡಳಿತ ದಾರ ಎ. ಜೀವಂಧರ ಕುಮಾರ್, ಪೂಜಾ ಸಮಿತಿ ಅಧ್ಯಕ್ಷ ಶೀನ ಶೆಟ್ಟಿ ಕಿರಿಂಬಿ, ವಲಯ ಮೇಲ್ವಿಚಾರಕ ಯೋಗೀಶ್, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಸುಧಾಕರ ಪಿ., ರುಕ್ಮಯ, ಒಕ್ಕೂಟಗಳ ಅಧ್ಯಕ್ಷರಾದ ವೆಂಕಪ್ಪ ಮೂಲ್ಯ, ಆನಂದ ಕೋಡಿಂಗೇರಿ, ದಯಾನಂದ, ನಾರಾಯಣ, ಸೇವಾ ಪ್ರತಿನಿಧಿಗಳಾದ ಕೃಷ್ಣಪ್ಪ ಪೂಜಾರಿ, ಅಶೋಕ ನಾಯ್ಕ, ಒಕ್ಕೂಟದ ಹಾಗೂ ಪೂಜಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಮಾರೂರು ಖಂಡಿಗದ ರಾಮದಾಸ ಆಸ್ರಣ್ಣರು ಪೌರೋಹಿತ್ಯ ನೆರವೇರಿಸಿದರು. ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.