ಸುಳ್ಯ : ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಉತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬುಧವಾರ ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಶುದ್ಧಿ ಕಲಶ, ವಿಷ್ಣು ಮಹಿಳಾ ಭಜನ ಮಂಡಳಿ ಬೆಳಂದೂರು ವಲಯದಿಂದ ಭಜನ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ರಂಗಪೂಜೆ, ಮಹೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ನಡೆಯಿತು. ಬಳಿಕ ಗುಳಿಗ, ಪಂಜುರ್ಲಿ ದೈವದ ನೇಮ, ಗುರುವಾರ ಮುಂಜಾನೆ ಶಿರಾಡಿ ದೈವದ ನೇಮ ನಡೆಯಿತು.
ಆಡಳಿತ ಮೊಕ್ತೇಸರ ಎಂ.ಕೆ. ಬಾಲಚಂದ್ರ ರಾವ್, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ತಿರುಮಲೇಶ್ವರ ಭಟ್ ಕಾನಾವು, ಉತ್ಸವ ಸಮಿತಿ ಅಧ್ಯಕ್ಷ ಬಿ.ಜಿ. ಭಾಸ್ಕರ ರೈ, ಮೊಕ್ತೇಸರರಾದ ಕುಂಬ್ರ ದಯಾಕರ ಆಳ್ವ, ಗೋಪಾಲಕೃಷ್ಣ ಭಟ್ ಕಾನಾವು, ವಸಂತ ಬೈಪಾಡಿತ್ತಾಯ ಮುಕ್ಕೂರು, ಕುಶಾಲಪ್ಪ ಗೌಡ ಪೆರುವಾಜೆ, ಸುಜಾತಾ ವಿ. ರಾಜ್ ಕಜೆ, ಪುಷ್ಪಾವತಿ ಎಂ. ಕಂಡಿಪ್ಪಾಡಿ, ಅರ್ಚಕ ಸುರೇಶ್ ಉಪಾಧ್ಯಾಯ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿಯ ಸುಧಾಕರ ರೈ ಕುಂಜಾಡಿ, ರಾಮಚಂದ್ರ ಭಟ್ ಕೋಡಿಬೈಲು ಉಪಸ್ಥಿತರಿದ್ದರು.