Home ಧಾರ್ಮಿಕ ಸುದ್ದಿ  ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ದರ್ಶನ ಬಲಿ, ಬಟ್ಟಲು ಕಾಣಿಕೆ

 ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ದರ್ಶನ ಬಲಿ, ಬಟ್ಟಲು ಕಾಣಿಕೆ

1548
0
SHARE

ಅರಂತೋಡು : ಪೆರಾಜೆ ಶ್ರೀ ಶಾಸ್ತಾವು ದೇವರ ಕಾಲಾವಧಿ ಜಾತ್ರೆ ಪ್ರಾರಂಭಗೊಂಡಿದ್ದು, ಮಾ. 27ರಂದು ಬೆಳಗ್ಗೆ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಮಾ. 26ರಂದು ಕಲಶೋತ್ಸವ, ಮಹಾಪೂಜೆ, ಮಹಾ ಸಮಾರಾಧನೆ, ಉಳ್ಳಾಕುಳ ಮಾಡದ ಆರಮನೆಯಿಂದ ಭಂಡಾರ ಆಗಮನವಾಯಿತು. ರಾತ್ರಿ ತುಳು ಕೋಲಾಟದ ಬೆಳ್ಳಾಟ, ಬೇಟೆ ಕರಿಮಗನ್‌ ಈಶ್ವರನ್‌ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು ನಡೆಯಿತು.

ಆಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ, ದೇವ ತಕ್ಕರಾದ ರಾಜಗೋಪಾಲ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧನಂಜಯ ಕೋಡಿ, ಕಾರ್ಯದರ್ಶಿ ಆಶೋಕ್‌ ಪೀಚೆ, ತಕ್ಕ ಮುಖ್ಯಸ್ಥರಾದ ವಿಶ್ವನಾಥ ಮೂಲೆಮಜಲು, ಭಾಸ್ಕರ ಕೋಡಿ, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ, ಪುರುಷೋತ್ತಮ ನಿಡ್ಯಮಲೆ, ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು ಭಕ್ತರು ಹಾಜರಿದ್ದರು.

ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ಎ. 10ರಂದು ವಿಜೃಂಭಣೆಯ ಜಾತ್ರೆ ನಡೆಯಲಿದೆ.

LEAVE A REPLY

Please enter your comment!
Please enter your name here