Home ಧಾರ್ಮಿಕ ಸುದ್ದಿ ಪೆರಾಜೆ ಶಾಸ್ತಾವು ದೇಗುಲ: ಜಾತ್ರೆಗೆ ಚಾಲನೆ

ಪೆರಾಜೆ ಶಾಸ್ತಾವು ದೇಗುಲ: ಜಾತ್ರೆಗೆ ಚಾಲನೆ

1715
0
SHARE

ಬೆಳ್ಳಾರೆ : ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೆ ಮಾ. 25ರಿಂದ ಆರಂಭಗೊಂಡಿದ್ದು, ಎ. 10ರ ತನಕ ನಡೆಯಲಿದೆ. ಮಾ. 9ರಂದು ಗೊನೆ ಮುಹೂರ್ತ ನಡೆದಿತ್ತು. ಮಾ. 25ರಂದು ಉಗ್ರಾಣ ತುಂಬಿಸಲಾಯಿತು. ಮಾ. 26ರಂದು ಬೆಳಗ್ಗೆ ಕಲಶೋತ್ಸವ, ಮಹಾಪೂಜೆ, ಮಹಾ ಸಮಾರಾಧನೆ, ಸಾಯಂಕಾಲ ಶ್ರೀ ಉಳ್ಳಾಕುಲ ಮಾಡದ ಅರಮನೆಯಿಂದ ಭಂಡಾರ ತರುವುದು, ಮುಖತೋರಣ ಏರಿಸುವುದು, ದೇವರ ನೃತ್ಯಬಲಿ, ರಾತ್ರಿ ಶ್ರೀ ದೇವರ ಭೂತಬಲಿ ನಡೆಯಿತು.

ಮಾ.27ರಂದು ದರ್ಶನಬಲಿ, ಬಟ್ಟಲು ರಾತ್ರಿ ತುಳುಕೋಲದ ಬೆಳ್ಳಾಟ 2, ಬೇಟೆ ಕರಿಮಗನ್‌ ಈಶ್ವರನ್‌ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು 2 ನಡೆಯಿತು. ಮಾ. 28ರಂದು ಮಧ್ಯಾಹ್ನದಿಂದ ಬೇಟೆ ಕರಿಮಗನ್‌ ಈಶ್ವರನ್‌ ದೈವ, ಬೇಟೆಕರಿಮಗನ್‌ ಈಶ್ವರನ್‌ ಬೆಳ್ಳಾಟ ಮತ್ತು ತುಳು ಕೋಲ 2ರ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು ನಡೆದವು.

ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ದೇವತಕ್ಕ ರಾಜಗೋಪಾಲ ರಾಮಕಜೆ, ಆಡಳಿತ ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧನಂಜಯ ಕೋಡಿ, ಅಶೋಕ ಪೀಚೆ ಮೊದಲದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here