Home ಧಾರ್ಮಿಕ ಸುದ್ದಿ ಪೆರಾಜೆ: ಶಾಸ್ತಾವು ಕಾಲಾವಧಿಜಾತ್ರೆಗೆ ಗೊನೆ ಮುಹೂರ್ತ

ಪೆರಾಜೆ: ಶಾಸ್ತಾವು ಕಾಲಾವಧಿಜಾತ್ರೆಗೆ ಗೊನೆ ಮುಹೂರ್ತ

1864
0
SHARE

ಅರಂತೋಡು : ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಜಾತ್ರೆಗೆ ಗೊನೆ ಮುಹೂರ್ತ ನಡೆಯಿತು. ಪುದುವಟ್ಟು ಕಾಪು ಸ್ಥಾನದಿಂದ ದೈವಜ್ಞ ವೆಂಕಟ್ರಮಣ ಪಾಂಗಣ್ಣಾಯ ಅವರ
ನೇತೃತ್ವದಲ್ಲಿ ಗೊನೆ ಕಡಿಯಲಾಯಿತು. ಮೂಲೆಮಜಲಿನಿಂದ ದೇವಸ್ಥಾನದ ವರೆಗೆ ಬ್ಯಾಂಡ್‌ ವಾಲಗದೊಂದಿಗೆ ಗೊನೆಯನ್ನು ತರಲಾಯಿತು.

ಆಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ರಾಜಗೋಪಾಲ ರಾಮಕಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧನಂಜಯ ಕೋಡಿ, ಆಡಳಿತ ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಅಶೋಕ ಪೀಚೆಮನೆ, ತಕ್ಕ ಮುಖ್ಯಸ್ಥರಾದ ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ, ಪುರುಷೋತ್ತಮ ನಿಡ್ಯಮಲೆ, ತಾಲೂಕು ಪಂಚಾಯತ್‌ ಸದಸ್ಯ ನಾಗೇಶ್‌ ಕುಂದಲ್ಪಾಡಿ, ಎನ್‌.ಎ. ಜಿತೇಂದ್ರ, ಆರ್‌ .ಡಿ. ಆನಂದ, ಮಾಜಿ ಮೊಕ್ತೇಸರರಾದ ಸುರೇಶ್‌ ಪೆರುಮುಂಡ, ಲೋಕನಾಥ ಅಮೆಚೂರು, ಪದ್ಮಯ್ಯ ಮಾಸ್ತರ್‌, ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಮತ್ತು ಗ್ರಾಮದ ಎಲ್ಲ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here