ನೀರುಮಾರ್ಗ: ಇಲ್ಲಿನ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನ ಪೂಜೆ ವೇಳೆ ದೇವಸ್ಥಾನಕ್ಕೆ ನವಿಲು ಆಗಮಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಇತ್ತೀಚೆಗೆ ದೇವಸ್ಥಾನಕ್ಕೆ ಅರ್ಪಿಸಿದ ಧ್ವಜಸ್ತಂಭಕ್ಕೆ ತೈಲವಾಸ ಪೂಜೆ ಅದ್ಧೂರಿಯಾಗಿ ನಡೆದಿತ್ತು. ಧ್ವಜಸ್ತಂಭ ಪೂಜೆ ವೇಳೆ ದೇವಾಲಯದಲ್ಲಿ ನವಿಲಿನ ಜೋರಾದ ಧ್ವನಿ ಕೇಳಿಸಿತ್ತು. ಇದರಿಂದ ಅಚ್ಚರಿಯಾಗಿ ಭಕ್ತರೆಲ್ಲ ಬಂದು ನೋಡಿದಾಗ, ಸುಬ್ರಹ್ಮಣ್ಯ ದೇವರಿಗೆ ಗರ್ಭಗುಡಿಯಲ್ಲಿ ಪೂಜೆ ನಡೆಯುತ್ತಿದ್ದರೆ, ಗರ್ಭಗುಡಿ ಮುಂಭಾಗವೇ ನವಿಲು ನಿಂತಿತ್ತು
ಸಾಮಾನ್ಯವಾಗಿ ಪ್ರಾಣಿ ಪಕ್ಷಿಗಳು ಅಕಸ್ಮಾತ್ ಆಗಿ ಜನಜಂಗುಳಿ ನಡುವೆ ಬಂದಾಗ ಹೆದರಿ ಅಲ್ಲಿಂದ ಓಡಲು ಪ್ರಯತ್ನಿಸುತ್ತವೆ. ಆದರೆ ಈ ನವಿಲು ಮಾತ್ರ ದೇವರ ಪ್ರತಿ ಪೂಜಾ ಕಾರ್ಯದಲ್ಲೂ ಭಾಗಿಯಾಗಿ ದೇಗುಲಕ್ಕೆ ಪ್ರದಕ್ಷಿಣೆ ಹಾಕಿದ್ದಾಗಿ ತಿಳಿದುಬಂದಿದೆ. ಈ ರೀತಿ ನವಿಲು ದೇಗುಲದಲ್ಲಿ ಪ್ರದಕ್ಷಿಣೆ ಮಾಡಿರುವುದು ಭಕ್ತರಲ್ಲಿ ಆಚ್ಚರಿ ಮೂಡಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.