ಮಹಾನಗರ: ಶ್ರೀ ಸೂರ್ಯ ನಾರಾಯಣ ದೇವಸ್ಥಾನ ಮರೋಳಿಯಲ್ಲಿ ನಡೆಯುವ ರಥೋ ತ್ಸವದ ಪ್ರಯುಕ್ತ ಗುರುವಾರ ಎಲ್ಲ ಗ್ರಾಮಗಳಿಂದ ಸಂಗ್ರಹಿಸಲ್ಪಟ್ಟ ಹೊರೆ ಕಾಣಿಕೆಯನ್ನು ಕ್ಷೇತ್ರಕ್ಕೆ ತರಲಾಯಿತು.
ಮೆರವಣಿಗೆಗೆ ಕುಡುಪು ಕ್ಷೇತ್ರದ ತಂತ್ರಿಗಳಾದ ಕೆ. ನರಸಿಂಹ ತಂತ್ರಿ ಚಾಲನೆ ನೀಡಿದರು. ಸದಾನಂದ ವಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಚಿತ್ತರಂಜನ್ ಕೆ., ಅನಿಲ್ ಶೆಟ್ಟಿ ಮನ್ಕುತೋಟಗುತ್ತು, ದೇವೇಂದ್ರ ಮತ್ತು ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಜೆ. ಬಾಲಕೃಷ್ಣ ಕೊಟ್ಟಾರಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಪಿ. ಶೆಟ್ಟಿ, ಕಾರ್ಯದರ್ಶಿ ಗಣೇಶ್ ಶೆಟ್ಟಿ ಜಪ್ಪುಗುಡ್ಡೆಗುತ್ತು, ವಿಶ್ವನಾಥ್ ಆಳ್ವ ತಾರ್ಧೋಲ್ಯ ತರವಾಡು ಮನೆ, ಉಮೇಶ್ ರೈ ಪದವು ಮೇಗಿನಮನೆ, ಭುಜಂಗ ಶೆಟ್ಟಿ ಜಪ್ಪುಗುಡ್ಡೆಗುತ್ತು, ಅಚ್ಯುತ್ ಭಟ್ ಮತ್ತು ಏಳು ಗ್ರಾಮದ ಗ್ರಾಮ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಹಲವಾರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.