Home ಧಾರ್ಮಿಕ ಸುದ್ದಿ ಪಾವಂಜೆ: ಇಂದಿನಿಂದ ವಿಶ್ವ ಜಿಗೀಷದ್‌ ಯಾಗ

ಪಾವಂಜೆ: ಇಂದಿನಿಂದ ವಿಶ್ವ ಜಿಗೀಷದ್‌ ಯಾಗ

1761
0
SHARE

ಪಾವಂಜೆ : ಇಲ್ಲಿ ನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್‌ ಯಾಗಕ್ಕೆ ಎ. 10 ಅಧಿಕೃತವಾಗಿ ಚಾಲನೆ ಸಿಗಲಿದೆ. ಶಾರಧ್ವತ ಯಜ್ಞಾಂಗಣದಲ್ಲಿ ಬೆಳಗ್ಗೆ 6ರಿಂದ 8, ಮಧ್ಯಾಹ್ನ 11ರಿಂದ 12.30, ಸಂಜೆ 3ರಿಂದ 4.30ರವರೆಗೆ ತ್ರಿಕಾಲ ಯಾಗದ ಸಮಯದಲ್ಲಿ ಆರಂಭವಾಗಲಿದೆ. ಜನಪ್ರತಿನಿಧಿಯವರಿಗೆ ಸಂಜೆ ನಿತ್ಯ ಪೂರ್ಣಾಹುತಿಯನ್ನು ಸಂಜೆ 4.30ರಿಂದ 6ರವರೆಗೆ ಅವಕಾಶವಿದೆ.

ನಿರಂತರ ಅನ್ನ ಪ್ರಸಾದ
ಕ್ಷೇತ್ರದಲ್ಲಿ ಅನ್ನಪ್ರಸಾದಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ನಿರಂತರವಾಗಿ ಅನ್ನಪ್ರಸಾದ ಎ. 10ರಿಂದ ನಡೆಯಲಿದೆ. ಸಂಜೆ 6ರಿಂದ 7ರವರೆಗೆ ಚಿಂತನ ಮಂಥನ ಕಾರ್ಯಕ್ರಮ ಜರಗಲಿದೆ. ಸ್ಥಳೀಯ ಸಂಘ -ಸಂಸ್ಥೆಗಳು, ಸ್ವಯಂ ಸೇವಕರಾಗಿ ಸೇವೆಯನ್ನು ನೀಡಲಿದ್ದಾರೆ.

ಎ. 17 ಮಹಾ ಪೂರ್ಣಾಹುತಿ
ಸಾರ್ವತ್ರಿಕವಾಗಿ ಯಾಗ ಮಹಾ ಪೂರ್ಣಾಹುತಿಯು ವೇದ ಕೃಷಿಕ ಕೆ.ಎಸ್‌. ನಿತ್ಯಾನಂದ ಅವರ ಮಾರ್ಗದರ್ಶನದಲ್ಲಿ ಎ. 17ರಂದು ಜರಗಲಿದೆ. ಪಾವಂಜೆ ಕ್ಷೇತ್ರದಲ್ಲಿ ಈ ಹಿಂದೆ ಗಾಯತ್ರೀ ಮಹಾಯಾಗ, ಪುಂಡರೀಕ ಯಾಗ, ಸೌತ್ರಾಮಣಿ ಗವಾಮಯನ ಯಾಗ ಸಂಪನ್ನಗೊಂಡಿತ್ತು.

LEAVE A REPLY

Please enter your comment!
Please enter your name here