Home ಧಾರ್ಮಿಕ ಸುದ್ದಿ ಪಾವಂಜೆ ಯಾಗ: ವಿವಿಧ ಶಾಂತಿ ಪ್ರಕ್ರಿಯೆಗೆ ಚಾಲನೆ

ಪಾವಂಜೆ ಯಾಗ: ವಿವಿಧ ಶಾಂತಿ ಪ್ರಕ್ರಿಯೆಗೆ ಚಾಲನೆ

1979
0
SHARE

ಪಾವಂಜೆ : ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ವಿಶ್ವ ಜಿಗೀಷದ್‌ ಯಾಗದಲ್ಲಿ ಎ. 15ರಂದು ವಿವಿಧ ಶಾಂತಿ ಪ್ರಕ್ರಿಯೆಗಳು ಜರಗಿತು.

ಬೆಳಗ್ಗೆಯಿಂದ ನಡೆದ ಯಾಗದ ಯಜ್ಞಾಂಗಣದಲ್ಲಿ ವಟುಗಳಿಗೆ ಉಪನಯನ, ಹಿರಿಯ ದಂಪತಿಗಳು ಶಾಂತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಯುಗಾದಿಯ ಸಂಭ್ರಮದಲ್ಲಿದ್ದ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆ, ಪುನಸ್ಕಾರಗಳಲ್ಲಿ ಭಾಗ ವಹಿಸಿದ್ದರು. ದೇಗುಲದಲ್ಲಿ ವರ್ಷಾವಧಿ  ಜಾತ್ರಾ ಮಹೋತ್ಸವದ ಸಂಭ್ರಮದ ವಾತಾವರಣ ಇರುವುದರಿಂದ ಭಕ್ತರ ಸಂಖ್ಯೆಯು ಹೆಚ್ಚಾಗಿತ್ತು.

ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಅಂದಾಜು 8 ಸಾವಿರಕ್ಕೂ ಹೆಚ್ಚು ಮಂದಿ ಪ್ರಸಾದವನ್ನು ಸ್ವೀಕರಿಸಿದರು. ಸಂಜೆ 30 ಮಂದಿ ವಿವಿಧ ಕ್ಷೇತ್ರದ ಜನಪ್ರತಿನಿ ಧಿಗಳು ಪೂರ್ಣಾಹುತಿಯಲ್ಲಿ ಭಾಗವಹಿಸಿದರು.

ಮಹರ್ಷಿ ಜಾತೂಕರ್ಣ ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ಮಾತೃ ಭಜನ ಮಂಡಳಿಯಿಂದ ಭಜನ ಸಂಕೀರ್ತನೆ ಹಾಗೂ ಮಾಂಡೋಲಿನ್‌ ವಾದನವನ್ನು ಸದ್ಗುಣ ಐತಾಳ್‌ ಹಾಗೂ ಮೃದಂಗದಲ್ಲಿ ಸುಮುಖ ಕಾರಂತ್‌ ಅವರು ನುಡಿಸಿದರು. ಸಂಜೆ ಸತೀಶ್‌ ಸುರತ್ಕಲ್‌ ಬಳಗದಿಂದ ಭಕ್ತಿ ಭಾವ ಗಾಯನ ನಡೆಯಿತು. ಹಳೆಯಂಗಡಿ, ತೋಕೂರು, ಕೋಟೆಬಬ್ಬು ದೈವಸ್ಥಾನದ ವತಿಯಿಂದ ಹೊರೆಕಾಣಿಕೆಯನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here