Home ಧಾರ್ಮಿಕ ಸುದ್ದಿ ಪಾವಂಜೆ: ಉಗ್ರಾಣ ಮುಹೂರ್ತ

ಪಾವಂಜೆ: ಉಗ್ರಾಣ ಮುಹೂರ್ತ

1636
0
SHARE

ಪಾವಂಜೆ : ಧಾರ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ಅನ್ನ ಪ್ರಸಾದವನ್ನು ನೀಡಿದರೆ ಅಲ್ಲಿನ ಸಾನ್ನಿಧ್ಯತೆಯ ಪಾವಿತ್ರ್ಯತೆ ಹೆಚ್ಚುತ್ತದೆ. ಪಾವಂಜೆಯಲ್ಲಿನ ಯಾಗ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ಅನ್ನದಾನಕ್ಕೆ ಮಹತ್ವವನ್ನು ನೀಡಲಾಗಿದೆ ಎಂದು ಸಾಮಾಜಿಕ, ಧಾರ್ಮಿಕ ನೇತಾರ ಕಡಂಬೋಡಿ ಮಹಾಬಲ ಪೂಜಾರಿ ಹೇಳಿದರು.

ಅವರು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ವಿಶ್ವ ಜಿಗೀಷದ್‌ ಯಾಗ ಹಾಗೂ ಬ್ರಹ್ಮಕಲಶೋತ್ಸವಕ್ಕಾಗಿ ಮಾ.14ರಂದು ನಡೆದ ಉಗ್ರಾಣ ಮುಹೂರ್ತ ನೆರವೇರಿಸಿದರು.

ದೇಗುಲದ ಧರ್ಮದರ್ಶಿ ಯಾಜಿ ಡಾ| ಎಚ್‌.ನಿರಂಜನ್‌ ಭಟ್‌ ಅವರು ಉಗ್ರಾಣದಲ್ಲಿ ನಿರ್ಮಿಸಿರುವ ಉಗ್ರಾಣ ದೇವತೆ ಧಾನ್ಯಲಕ್ಷ್ಮೀ ವಿದ್ಯುಕ್ತವಾಗಿ ಧಾರ್ಮಿಕ ವಿಧಿ  ವಿಧಾನವನ್ನು ನೆರವೇರಿಸಿ, ಅನ್ನದಾನ ಸಮಿತಿಯ ಮಂಡಲ ಪ್ರಧಾನ ಚಂದ್ರಶೇಖರ್‌ ನಾನಿಲ್‌ ಹಾಗೂ ಧಾನ್ಯಕೋಶ ಮಂಡಳಿಯ ಮಂಡಲ ಪ್ರಧಾನ ಪೀತಾಂಬ ಹೆರಾಜೆ ಅವರಿಗೆ ಜವಾಬ್ದಾರಿಯನ್ನು ಹಂಚಿದರು. ಯಾಗದ ಪ್ರಮುಖರಾದ ಚಿಕ್ಕಮಗಳೂರಿನ ವೇದಕೃಷಿಕ ಕೆ.ಎಸ್‌.ನಿತ್ಯಾನಂದ ಅವರು ಆಶೀರ್ವಚನ ನೀಡಿದರು.

ದೇಗುಲದ ಆಡಳಿತ ಮೊಕ್ತೇಸರ ಎಂ.ಶಶೀಂದ್ರ ಕುಮಾರ್‌, ಅನ್ನದಾನ ನಿರ್ವಹಣೆಯ ಪ್ರಮುಖರಾದ ಮುರಳೀಧರ ರಾವ್‌, ವಿವಿಧ ಸಮಿತಿಯ ಮುರ ಸದಾಶಿವ ಶೆಟ್ಟಿ, ಬಿ.ಗಣೇಶ್‌ ಕುಡ್ವ, ಸುಕುಮಾರ್‌ ಬೊಳ್ಳೂರು, ರತ್ನಾಕರ ಯಾನೆ ಕಾಂತಣ್ಣ ಗುರಿಕಾರ್‌, ರಜನಿ ದುಗ್ಗಣ್ಣ, ನಕ್ರೆ ಬಾಲಕೃಷ್ಣ ರಾವ್‌, ಮಾಧವ ಕೆರೆಕಾಡು, ಸುಧಾಕರ ಆರ್‌.ಅಮೀನ್‌, ಉದಯ ಬಿ.ಸುವರ್ಣ ಸಸಿಹಿತ್ಲು, ರಮೇಶ್‌ ಕೊಟ್ಯಾನ್‌, ಜಗನ್ನಾಥ ಕರ್ಕೇರ, ರಾಜೇಶ್‌ ಕೆರೆಕಾಡು, ಧರ್ಮಾನಂದ ಶೆಟ್ಟಿಗಾರ್‌, ವಿನೋದ್‌ ಕುಮಾರ್‌ ಕೊಳುವೈಲು, ಉಮೇಶ್‌ ಪೂಜಾರಿ ಪಡುಪಣಂಬೂರು, ಸದಾನಂದ ಗಾಂಭೀರ್‌, ವಾಸುದೇವ ಶೆಣೈ, ಶೋಭೇಂದ್ರ ಸಸಿಹಿತ್ಲು, ಅಶೋಕ್‌ ಸಸಿಹಿತ್ಲು, ಮೋಹನ್‌ ಭಟ್‌ ಹಳೆಯಂಗಡಿ, ಪುನೀತ್‌ ಕೃಷ್ಣ ಉಪಸ್ಥಿತರಿದ್ದರು. ಕಾರ್ಯಾಲಯದ ಮಂಡಲ ಪ್ರಧಾನ ವಿನೋದ್‌ ಎಸ್‌. ಸಾಲ್ಯಾನ್‌ ಸ್ವಾಗತಿಸಿದರು.

LEAVE A REPLY

Please enter your comment!
Please enter your name here