Home ಧಾರ್ಮಿಕ ಸುದ್ದಿ ಪಾವಂಜೆ: ಮೀನ ಸಂಕ್ರಮಣೋತ್ಸವ ಸಂಪನ್ನ

ಪಾವಂಜೆ: ಮೀನ ಸಂಕ್ರಮಣೋತ್ಸವ ಸಂಪನ್ನ

1767
0
SHARE

ಪಾವಂಜೆ : ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಏ. 19ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಿರಂತರವಾಗಿ ನಡೆಯುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಶರವಣಭವನಿಗೆ ಮೀನ ಸಂಕ್ರಮಣೋತ್ಸವವು ದೇವಸ್ಥಾನದ ವಠಾರದಲ್ಲಿ ಸಂಪನ್ನಗೊಂಡಿತು.

ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಸಂಯೋಜನೆಯಲ್ಲಿ ಬೆಳಗ್ಗೆ ರವಿ ಸೇರಿಗಾರ ಮತ್ತು ಬಳಗದಿಂದ ವಾದ್ಯಗೋಷ್ಠಿ, ಚಂದ್ರಾವಳಿ ಶ್ರೌತಿ ಶಶಿಕಲಾ ಶ್ರೌತಿ ಇವರಿಂದ ವೇದಘೋಷ, ಕೆ. ಮುರಲೀಧರ ಅವರಿಂದ ಕೊಳಲು ವಾದನ, ಉಪ್ಪಳದ ಕುಬಣೂರು ಶ್ರೀಮಾತಾ ಮಹಿಳಾ ಭಜನಾ ಮಂಡಳಿಯಿಂದ ಭಜನ ಸೇವೆ ನಡೆಯಿತು. ಮಧ್ಯಾಹ್ನ ಕುದ್ಮಾರು ಸಹೋ ದರಿಯರಾದ ಲತಾ ತಂತ್ರಿ, ಪ್ರಭಾ ರಮೇಶ್‌ ಅವರಿಂದ ಕರ್ನಾಟಕ ಸಂಗೀತ, ಶರ್ಮಿಳಾ ರಾವ್‌ ಅವರಿಂದ ಪಿಟೀಲು ವಾದನ, ಸಂಜೆ ಪೆರ್ಡೂರು  ಶ್ರೀ ಅನಂತಪದ್ಮನಾಭ ಕೃಪಾ ಷೋಷಿತ ಯಕ್ಷಗಾನ ಮಂಡಳಿಯಿಂದ ರಾಜಾರುದ್ರಕೋಪ ಪ್ರಸಂಗವು ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here