Home ಧಾರ್ಮಿಕ ಸುದ್ದಿ ಪಾವಂಜೆ: ಆರಾಧನೋತ್ಸವ ಸಂಪನ್ನ

ಪಾವಂಜೆ: ಆರಾಧನೋತ್ಸವ ಸಂಪನ್ನ

1741
0
SHARE

ಪಾವಂಜೆ: ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಜ. 15ರಂದು ಪಾವಂಜೆ ಹರಿದಾಸ ಶ್ರೀ ಲಕ್ಷ್ಮೀನಾರ್ಣಪ್ಪಯ್ಯ ಸ್ಮರಣಾರ್ಥ ನಡೆದ ಆರಾಧನೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿದೆ.

ಭಜನ ಸಂಕೀರ್ತನೆ, ಭಕ್ತಿ ಗೀತಾರಾಧನೆ, ಸಂಗೀತದ ಆರಾಧನೆ ನಡೆಯಿತು. ಭಜನ ಸಂಕೀರ್ತನೆಯಲ್ಲಿ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ, ಪಾವಂಜೆ ಚಂದ್ರಮ್ಮ ವಾಸು ಭಟ್ಟ ಸ್ಮಾರಕ ಮಹಿಳಾ ಮಂಡಳಿ, ಹಳೆಯಂಗಡಿ ಶ್ರೀ ವಿಠೊಭಾ ಭಜನ ಮಂಡಳಿ, ಕಾರ್ಕಳ ಶ್ರೀ ವೆಂಕಟ್ರಮಣ ಭಜನ ಮಂಡಳಿ, ಹಳೆಯಂಗಡಿ ಶ್ರೀ ವಿಶ್ವಕರ್ಮ ಭಜನ ಮಂಡಳಿ, ಕಿನ್ನಿಗೋಳಿ ಶ್ರೀ ರಾಮನಾಮ ಸಂಕೀರ್ತನ ಭಜನ ಮಂಡಳಿ, ಕೊಲ್ನಾಡು ಶ್ರೀ ದುರ್ಗಾಪ್ರಸಾದ ಭಜನ ಸಂಘ, ಪೊಳಲಿ ಜಗದೀಶದಾಸರು, ಮುಕ್ಕ ಸತ್ಯಧರ್ಮ ಭಜನ ಮಂಡಳಿ, ಮುಕ್ಕ ಸುರೇಂದ್ರ ಕುಮಾರ್‌ ಮತ್ತು ಬಳಗದವರು ನಡೆಸಿಕೊಟ್ಟರು.

ಭಕ್ತಿಗೀತೆಯನ್ನು ಬಪ್ಪನಾಡು ಭಗವಾನದಾಸ, ಸುದೇಷ್ಮಾ ಕುಮಾರಿ ಬಳಗದವರು ನಡೆಸಿಕೊಟ್ಟರು. ಸಂಗೀತ ಕಾರ್ಯಕ್ರಮವನ್ನು ವಂದನಾರಾಣಿ ಕೇದಿಗೆ, ಸುಮನಾ ಪ್ರಶಾಂತ್‌, ರಂಗಭಟ್ ಮಧೂರು, ಸದಾಶಿವ ಆಚಾರ್ಯ ಕಾಸರಗೋಡು, ವಿದ್ಯಾಶ್ರೀ ವಿಕ್ರಂ, ವಿಜಯವಲ್ಲಿ, ವಾಣಿ ಸತೀಶ್‌ರಾವ್‌, ಶ್ರೀಶಾ ಪಾವಂಜೆ, ಅಡೂರು ಸಹೋದರಿಯರು ನೀಡಿದರು. ದೇಗುಲಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಆರಾಧನಾ ಮಹೋತ್ಸವಕ್ಕೆ ಸಾಕ್ಷಿಯಾದರು. ವಿವಿಧ ಪೂಜಾ ವಿಧಿ-ವಿಧಾನಗಳು ಜರಗಿದವು.

LEAVE A REPLY

Please enter your comment!
Please enter your name here