Home ಧಾರ್ಮಿಕ ಸುದ್ದಿ ಪಾವಂಜೆಯಲ್ಲಿ ಅನ್ನ ದಾಸೋಹಕ್ಕೆ ವಿಶೇಷ ಆದ್ಯತೆ

ಪಾವಂಜೆಯಲ್ಲಿ ಅನ್ನ ದಾಸೋಹಕ್ಕೆ ವಿಶೇಷ ಆದ್ಯತೆ

207
0
SHARE

ಪಾವಂಜೆ : ಪಾವಂಜೆ ಕ್ಷೇತ್ರ ದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವ ಭಾವಿಯಾಗಿ ಒಂದು ತಿಂಗಳಿನಿಂದ ನಿರಂತರವಾಗಿ ಅನ್ನ ಪ್ರಸಾದವನ್ನು ಸ್ವೀಕರಿಸಿರುವವರ ಸಂಖ್ಯೆಯೇ ಒಂದು ಲಕ್ಷ ಮೀರಿದೆ. ವಿಶ್ವ ಜಿಗೀಷದ್‌ ಯಾಗದ ಪ್ರಕ್ರಿಯೆ ಆರಂಭಿಸಿರುವ ಅನಂತರ 5 ದಿನದಲ್ಲಿ ಅಂದಾಜು 35 ಸಾವಿರ ಮಂದಿ ಅನ್ನ ದಾಸೋಹದಲ್ಲಿ ಪಾಲ್ಗೊಂಡಿದ್ದಾರೆ.

ಅಡುಗೆಯಲ್ಲೂ ಮೂರು ವಿಭಾಗ..
ಪ್ರತಿದಿನ ಬೆಳಗ್ಗೆ, ಸಂಜೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟೋಪಚಾರ, ಊಟದಲ್ಲಿ ಬಳಸಲಾಗುತ್ತಿರುವ ಸಿಹಿ ತಿಂಡಿಯನ್ನು ಮಾಡಲು ಮೂರು ವಿಭಾಗವಾಗಿ ವಿಂಗಡಿಸಿಕೊಂಡು, ಸುಮಾರು 40 ಮಂದಿ ಬಾಣಸಿಗರು ಅನ್ನ ಪ್ರಸಾದದ ವ್ಯವಸ್ಥೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.
ಎಲ್ಲ ಪಾತ್ರೆಗಳನ್ನು ಕಟಪಾಡಿಯ ಕಾಶಿನಾಥ ಶೆಣೈ ಅವರು ಒದಗಿಸಿದ್ದಾರೆ. ಪಾಕ ಶಾಲೆಯಲ್ಲಿ ಸ್ವತ್ಛತೆಗೆ ಕೂಡ ವಿಶೇಷ ಆದ್ಯತೆ ನೀಡಲಾಗಿದೆ.

ಸಮಯದ ಪರಿಮಿತಿಯಲ್ಲಿ…
ಬೆಳಗ್ಗೆ 7ರಿಂದ 11ರ ವರೆಗೆ ದೋಸೆ, ಪೂರಿ, ಉಪ್ಪಿಟ್ಟು ಹಾಗೂ ಇನ್ನಿತರ ಉಪಹಾರಗಳನ್ನು ದಿನಕ್ಕೊಂದರಂತೆ ಚಾಹದೊಂದಿಗೆ ನೀಡಲಾಗುತ್ತಿದೆ. ಮಧ್ಯಾಹ್ನ 11-30ರಿಂದ 3-30ರ ವರೆಗೆ ಮಹಾ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಅನ್ನ ಸಾರು, ಸಾಂಬಾರು, ಎರಡು ಬಗೆಯ ಪಲ್ಯ, ಪಾಯಸದ ಜತೆಗೆ ದಿನಕ್ಕೊಂದು ರೀತಿಯ ವಿಶೇಷ ಸಿಹಿತಿಂಡಿ ನೀಡಲಾಗುತ್ತಿದೆ. ಸಂಜೆ 4ರಿಂದ 7 ರವರೆಗೆ ವಿವಿಧ ರೀತಿಯ ಉಪಹಾರವನ್ನು ಚಾಹದೊಂದಿಗೆ ವಿತರಿಸಲಾಗುತ್ತಿದೆ. ರಾತ್ರಿ 7ರಿಂದ ಊಟದ ವ್ಯವಸ್ಥೆ ಮಾಡಲಾಗಿದೆ.

ಸ್ವಯಂ ಸೇವಕರ ದಂಡು
ಪ್ರತಿದಿನವು ಅಂದಾಜು 5 ಸಾವಿರ ಮಂದಿ ಕ್ಷೇತ್ರಕ್ಕೆ ಆಗಮಿಸಿ, ಅನ್ನ ಪ್ರಸಾದವನ್ನು ಸ್ವೀಕರಿಸುವವರಿಗೆ ಅಷ್ಟೇ ಅಚ್ಚುಕಟ್ಟಾಗಿ ದುಡಿಯುತ್ತಿದ್ದಾರೆ. ಬಂದಂತಹ ಪ್ರತಿಯೋರ್ವ ಸ್ವಯಂ ಸೇವ ಕರನ್ನು ಕ್ಷೇತ್ರದ ವತಿಯಿಂದ ವಿಶೇಷವಾಗಿ ಗೌರವಿಸಲಾಗುತ್ತಿದೆ. ಇದರಲ್ಲೂ ಮಹಿಳಾ ವರ್ಗ ಅತಿ ಹೆಚ್ಚು ಸಂಖ್ಯೆಯಲ್ಲಿ ಕಂಡು ಬಂದಿದೆ.

ಅನ್ನದಾನದ ಸೇವೆಯೇ ಶ್ರೇಷ್ಠ
ಭಕ್ತಿಯಿಂದ ದೇವರ ದರ್ಶ ನವನ್ನು ಮಾಡಿಕೊಂಡು ಬರುವ ಭಕ್ತರಿಗೆ ನೀಡುವ ಅನ್ನದಾನದ ವ್ಯವಸ್ಥೆಯಲ್ಲಿ ಬಾಣಸಿಗರು ಸಹ ತಮ್ಮ ಕರ್ತವ್ಯವನ್ನು ಸಮಯದ ಪರಿಮಿತಿಯಿಲ್ಲದೇ ತೊಡಗಿಸಿ ಕೊಂಡಿದ್ದಾರೆ. ಮುಖ್ಯವಾಗಿ ಸಮಯದ ಪರಿಪಾಲನೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಅನ್ನದಾನವೇ ಕ್ಷೇತ್ರದಲ್ಲಿ ಶ್ರೇಷ್ಠವಾಗಿರುವು ದರಿಂದ ಪರೋಕ್ಷವಾಗಿ ಪ್ರತ್ಯಕ್ಷವಾಗಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು. 40 ಮಂದಿ ಬಾಣಸಿಗರು ತಯಾರಿಸಿದ ಪದಾರ್ಥ ವನ್ನು 150 ಮಂದಿ ಉಣಬಡಿಸುತ್ತಿರುವುದು ಇಲ್ಲಿನ ವಿಶೇಷ.
 -ಮುರಳೀಧರ ರಾವ್‌ ಹೊಗೆಗುಡ್ಡೆ, ಪಾಕಶಾಲೆಯ ಬಾಣಸಿಗರ ಪ್ರಮುಖರು.

LEAVE A REPLY

Please enter your comment!
Please enter your name here