ಮಹಾನಗರ: ತುಳುನಾಡಿನಲ್ಲಿ ಪ್ರಸಿದ್ಧವಾಗಿರುವ ದೈವ ಕ್ಷೇತ್ರಗಳಲ್ಲಿ ಪೆರ್ಮುದೆ ಪಾರಾಳೆಗುತ್ತಿನ ಶ್ರೀ ಕೊಡ ಮಣಿತ್ತಾಯ ಕ್ಷೇತ್ರದ ಆದಿ ಯಜಮಾನ ತಿಮ್ಮಯ್ಯ ಚೌಟರ 39ನೇಯ ಉತ್ತಾ ರಾಧಿಕಾರಿಯಾಗಿ ಪಾರಾಳೆಗುತ್ತು ಭುಜಂಗ ಶೆಟ್ಟಿ ಅವರ ಪಟ್ಟ ಸ್ವೀಕಾರೋತ್ಸವ ಕಾರ್ಯ ಕ್ರಮ ಇತ್ತೀಚೆಗೆ ನಗರದಲ್ಲಿ ಜರಗಿತು. ಒಡಿಯೂರು ಕ್ಷೇತ್ರದ ಶ್ರೀ ಗುರು ದೇವಾನಂದ ಸ್ವಾಮೀಜಿ, ಗುರುಪುರದ ಶ್ರೀ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಗ್ರಾಮದ ತಂತ್ರಿ ವೈ. ರಾಧಾಕೃಷ್ಣ ತಂತ್ರಿ, ಶ್ರೀ ಕ್ಷೇತ್ರ ಕಟೀಲು ಆನುವಂಶಿಕ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣ, ಆನುವಂಶಿಕ ಅರ್ಚಕ ಕೆ. ವೆಂಕಟರಮಣ ಆಸ್ರಣ್ಣ, ಕೆ. ಅನಂತಪದ್ಮನಾಭ ಆಸ್ರಣ್ಣ, ಕೆ. ಕಮಲಾದೇವಿಪ್ರಸಾದ ಆಸ್ರಣ್ಣ, ಕೆ. ಹರಿನಾರಾಯಣದಾಸ ಆಸ್ರಣ್ಣ ಅವರು ಶುಭಹಾರೈಸಿದರು.
ಪೆರಿಂಜೆ ಪಡ್ಯಾರಬೆಟ್ಟು ಕೊಡಮ ಣಿತ್ತಾಯ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಜೀವಂದರ ಕುಮಾರ್ ಮತ್ತು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ವಾಸುದೇವ ಶಿಬರಾಯ, ಶಿಬರೂರುಗುತ್ತು ಉಮೇಶ್ ಗುತ್ತಿನಾರು, ಖಂಡಿಗೆಬೀಡು ಆದಿತ್ಯ ಮುಕ್ಕಾಲ್ದಿ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ಅಭಯಚಂದ್ರ ಜೈನ್, ಎ. ಸದಾನಂದ ಶೆಟ್ಟಿ, ಪಡು ಚಿತ್ತರಂಜನ್ ರೈ, ದ.ಕ. ಮತ್ತು ಉಡುಪಿ ಜಿಲ್ಲೆಗಳ ಗಣ್ಯ ಗುತ್ತು ಮನೆತನಗಳ ಗಡಿ ಪ್ರಧಾನರು ಮತ್ತು ಊರ ಗುತ್ತು, ಬೀಡು, ಬಾಳಿಕೆ ಮತ್ತು ಮನೆತನದವರು ಪಾಲ್ಗೊಂಡಿದ್ದರು.