Home ಧಾರ್ಮಿಕ ಸುದ್ದಿ ‘ಗುರುಪೂರ್ಣಿಮೆಯಂದು ಗುರುಸ್ಮರಣೆಯ ಸುಯೋಗ’

‘ಗುರುಪೂರ್ಣಿಮೆಯಂದು ಗುರುಸ್ಮರಣೆಯ ಸುಯೋಗ’

ಶ್ರೀ ದ್ವಾರಕಾನಾಥತೀರ್ಥ ವಡೇರ ಸ್ವಾಮೀಜಿ ಜನ್ಮ ಶತಾಬ್ದ ಆಚರಣೆ

1424
0
SHARE

ಮಂಗಳೂರು: ರಥಬೀದಿಯಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಪರಮ ಗುರುಗಳಾದ ಶ್ರೀ ದ್ವಾರಕಾನಾಥತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಜನ್ಮಶತಾಬ್ದ ಆಚರಣೆ ಮಂಗಳವಾರ ನಡೆಯಿತು.

ಈ ವೇಳೆ ಆಶೀರ್ವಚನ ನೀಡಿದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು, ಗುರುಪೂರ್ಣಿಮೆಯ ಪುಣ್ಯ ದಿನದಂದು ಗುರುಗಳ ಸ್ಮರಣೆ ಮಾಡಲು ಅವಕಾಶ ದೊರಕಿರುವುದು ಸುಯೋಗ. ಮಂಗಳೂರಿನ ಜನತೆಗೂ ಇದೊಂದು ಧನ್ಯತೆಯ ಕ್ಷಣ ಎಂದು ನುಡಿದರು.

ಸ್ವಾಮೀಜಿಯವರ ಪಟ್ಟಶಿಷ್ಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಮಠದ ಅಧ್ಯಕ್ಷ ಪ್ರಭಾಕರ ಕಾಮತ್‌, ಚಾತುರ್ಮಾಸ್ಯ ಸಂಚಾಲಕ ಪುತ್ತು ಪೈ, ಹಾಂಗ್ಯೋ ಐಸ್‌ಕ್ರೀಂನ ಪ್ರದೀಪ್‌ ಪೈ, ಮಠದ ಚೆಯರ್‌ಮನ್‌ ಬಸ್ತಿ ಶ್ರೀಪಾದ ಶೆಣೈ, ಮಾಜಿ ಜತೆ ಕಾರ್ಯದರ್ಶಿ ಬಸ್ತಿ ಪುರುಷೋತ್ತಮ ಶೆಣೈ ಉಪಸ್ಥಿತರಿದ್ದರು. ಮಠದ ಮಾಜಿ ಕಾರ್ಯದರ್ಶಿ ಕುಂಬ್ಳೆ ನರಸಿಂಹ ಪ್ರಭು ನಿರೂಪಿಸಿದರು.

LEAVE A REPLY

Please enter your comment!
Please enter your name here