ಪರ್ಲಡ್ಕ: ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ವಿದ್ಯಾರ್ಥಿ ಗಳ ಆಶ್ರಯದಲ್ಲಿ ನಡೆಯುವ ಶ್ರೀ ಗಣೇಶೋತ್ಸವದ 37ನೇ ವರ್ಷದ ಆಚರಣೆ ಪೂರ್ವಭಾವಿಯಾಗಿ ಶ್ರೀ ಗಣಪನ ವಿಗ್ರಹ ಮುಹೂರ್ತ ಕಾರ್ಯ ಕ್ರಮ ಪರ್ಲಡ್ಕದಲ್ಲಿ ನಡೆಯಿತು.
ವಿಗ್ರಹ ರಚನೆಕಾರ ತಾರಾನಾಥ ಆಚಾರ್ಯ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ-ವಿಧಾನ ಕಾರ್ಯಕ್ರಮ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ಪ್ರಕಾಶ್ ಮುಕ್ರಂಪಾಡಿ, ನಾಗೇಶ್ ಪೈ, ವೇಣುಗೋಪಾಲ, ಸುಖೇಶ್, ದುರ್ಗಾಪ್ರಸಾದ್, ಆಶ್ಪೇಷ್, ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಾದ ಸುಕುಮಾರ, ರಿತೀಂದ್ರ, ಆದರ್ಶ, ಪ್ರಜ್ವಲ್, ರಕ್ಷಿತ್, ಚೇತನ್, ಲೆನೀತ್, ಪ್ರತೀಕ್, ಶಮಂತ್, ರಕ್ಷಣ್, ಕೌಶಿಕ್, ಸ್ವಸ್ತಿಕ್, ಶ್ರೀಕರ, ಸುದೇಶ್, ಹರ್ಷ, ನಿತೀನ್ ಉಪಸ್ಥಿತರಿದ್ದರು.