ಮಹಾನಗರ : ವಾಮಂಜೂರು ಪರಾರಿಯಲ್ಲಿ ಜೀರ್ಣೋದ್ಧಾರಗೊಂಡ ನೂತನ ದೈವಸ್ಥಾನದಲ್ಲಿ ಶುಕ್ರವಾರ ಶ್ರೀ ಕೋರ್ದಬ್ಬು ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠೆಯು ಸಂಪನ್ನಗೊಂಡಿತು.·ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ನೃತ್ಯ ಕಾರ್ಯಕ್ರಮ, ರಾತ್ರಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಈ ಸಂದರ್ಭ ಕೊಳಕೆಬೈಲು ಚಂದ್ರಶೇಖರ್ ಶೆಟ್ಟಿ, ತಿರುವೈಲುಗುತ್ತು ನವೀನ್ಚಂದ್ರ ಆಳ್ವ, ಕೊಳಕೆಬೈಲುಗುತ್ತು ಸಂದೇಶ್ ರೈ, ಚಂದ್ರಹಾಸ, ಪಾಪೆಮಾರುಗುತ್ತು ಆನಂದ ಶೆಟ್ಟಿ, ರಾಜೀವ ಶೆಡ್ಡೆ, ಜಿತೇಂದ್ರ ಅಂಚನ್, ದಯಾನಂದ ಅಂಚನ್, ಲಕ್ಷ್ಮಣ್ ಕೊಟ್ಟಾರಿ, ಭೋಜ ಕೊಟ್ಟಾರಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.