Home ಧಾರ್ಮಿಕ ಸುದ್ದಿ ಪಾರ್ಲ ರಾಜನ್‌ ದೈವಸ್ಥಾನ ಪ್ರತಿಷ್ಠಾ ಬ್ರಹ್ಮಕಲಶ ಸಂಪನ್ನ

ಪಾರ್ಲ ರಾಜನ್‌ ದೈವಸ್ಥಾನ ಪ್ರತಿಷ್ಠಾ ಬ್ರಹ್ಮಕಲಶ ಸಂಪನ್ನ

768
0
SHARE

ಸವಣೂರು : ಪಾಲ್ತಾಡಿ ಗ್ರಾಮದ ಪಾರ್ಲ ರಾಜನ್‌ ದೈವದ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ
ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ. 10ರಂದು ನಡೆಯಿತು.

ಪ್ರತಿಷ್ಠಾ ಬ್ರಹ್ಮಕಲಶದ ಅಂಗವಾಗಿ ಮಂಗಳವಾರ ಬೆಳಗ್ಗೆ ಊರಿನವರಿಂದ ಹೊರೆಕಾಣಿಕೆ ಸಮರ್ಪಣೆ, ಸಂಜೆ ಕ್ಷೇತ್ರದ ತಂತ್ರಿಗಳಿಗೆ ಸ್ವಾಗತ, ರಾತ್ರಿ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಸ್ಥಳಶುದ್ದಿ,ಪ್ರಸಾದ ಶುದ್ದಿ, ಮಹಾ ಸುದರ್ಶನ ಹೋಮ, ಭಾದಕಾರ್ಷಣೆ, ಉಚ್ಚಾಟನೆ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಬುಧವಾರ ಬೆಳಗ್ಗೆ ಗಣಹೋಮ, ಪಂಚವಿಂಶತಿ, ಬ್ರಹ್ಮಕಲಶ ಪೂಜೆ, ವೃಷಭ ಲಗ್ನಮುಹೂರ್ತದಲ್ಲಿ ಶ್ರೀರಾಜನ ದೈವದ ಪ್ರತಿಷ್ಟೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಭಂಡಾರ ತೆಗೆದು ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ರಾಜನ್‌ ದೈವದ ನೇಮ ನಡೆಯಿತು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್‌ ಕುಮಾರ್‌ ರೈ ನಳೀಲು, ಅಧ್ಯಕ್ಷ ಸಂಜೀವ ಗೌಡ ಪಾಲ್ತಾಡಿ, ಉಪಾಧ್ಯಕ್ಷ ರಘುನಾಥ ರೈ ನಡುಕೂಟೇಲು, ಮೋನಪ್ಪ ಗೌಡ ಪಾರ್ಲ, ವಿಟ್ಠಲ ಶೆಟ್ಟಿ ಪಾರ್ಲ, ಸೀತಾರಾಮ ರೈ ಕಲಾಯಿ, ಪ್ರವೀಣ್‌ ರೈ ನಡುಕೂಟೇಲು, ಕಾರ್ಯದರ್ಶಿ ವಿನಯಚಂದ್ರ ಕೆಳಗಿನ ಮನೆ, ಜತೆ ಕಾರ್ಯದರ್ಶಿ ವಿದ್ಯಾಧರ ಗೌಡ ಪಾರ್ಲ, ಕೋಶಾಧಿಕಾರಿ ಜಯರಾಮ ಗೌಡ ದೊಡ್ಡಮನೆ, ದೈವಸ್ಥಾನಕ್ಕೆ ಸಂಬಂಧಪಟ್ಟ ಆರು ಮನೆಯವರಾದ ನರಸಿಂಹ ಪಕ್ಕಳ ಗುತ್ತಿನ ಮನೆ, ಜನಾರ್ದನ ಗೌಡ ಕೆಳಗಿನ ಮನೆ, ತಿಮ್ಮಪ್ಪ ಗೌಡ ದೊಡ್ಡಮನೆ,ಜಗದೀಶ್‌ ಗೌಡ ಖಂಡಿಗೆ, ರಾಮಕೃಷ್ಣ ಗೌಡ ಅಂಗಡಿಹಿತ್ಲು, ಮುಂಡಪ್ಪ ಪೂಜಾರಿ ಬೊಳಿಯಾಲ, ರಾಜನ್‌ ದೈವದ ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ ಸುಮಾ ಆನಂದ, ರಾಜನ್‌ ದೈವದ ಮಾವಿನಕಟ್ಟೆಯ ಗೋಪುರ ನಿರ್ಮಾಣ ಮಾಡಿದ ಸೇಸಮ್ಮ ಕೆಳಗಿನ ಮನೆ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here