ಮಧೂರು: ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋ ತ್ಸವದ ನಿಮಿತ್ತ ದೇವಸ್ಥಾನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಇದೇ ವೇಳೆ ವಿವಿಧೆಡೆಯಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯುತ್ತಿದ್ದು, ಉಗ್ರಾಣ ತುಂಬುತ್ತಿದೆ.
ಫೆ.14 ರಿಂದ ಆರಂಭಗೊಂಡ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ. 19ರಂದು ಸಂಪನ್ನಗೊಳ್ಳಲಿದೆ. ಬ್ರಹ್ಮಕಲಶೋತ್ಸವ ವ್ಯವಸ್ಥೆ ಅದ್ಭುತವಾಗಿದೆ. ಕಾರ್ಯಕರ್ತರ ಅಚ್ಚುಕಟ್ಟುತನದಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಫೆ. 16ರಂದು ಬೆಳಗ್ಗೆ ಗಣಪತಿ ಹವನ, ಪ್ರತಿಷ್ಠಾ ದಿನದ ಅಂಗವಾಗಿ ನವಕಾಭಿಷೇಕ, ಪಾರೆಕಟ್ಟೆಯ ಶ್ರೀ ಮುತ್ತಪ್ಪನ್ ಮಹಿಳಾ ಭಜನಾ ಸಂಘದಿಂದ ಭಜನೆ, ತೆರುವತ್ತ್ ಶ್ರೀ ಚೀರುಂಬಾ ಭಗವತಿ ಮಹಿಳಾ ಭಜನಾ ಸಂಘದಿಂದ ನೃತ್ಯ ಭಜನೆ, ಮಧ್ಯಾಹ್ನ ಅಂಕುರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಕೌಶಿಕ್ ರಾಮಕೃಷ್ಣ ಶ್ರಾವಣಕೆರೆ ಅವರಿಂದ ಶಾಸ್ತ್ರೀಯ ಸಂಗೀತ, ಕಲಾರತ್ನ ಶಂನಾಡಿಗ ಕುಂಬಳೆ ಅವರಿಂದ ಹರಿಕಥಾ ಸತ್ಸಂಗ, ಸಂಜೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಅಮೃತ ಕಲಾ ಕ್ಷೇತ್ರ ಕೂಡ್ಲು ಅವರಿಂದ ಭರತನಾಟ್ಯ, ಕಾಸರಗೋಡು ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಿಂದ ಯಕ್ಷಗಾನ, ಅಂಕುರ ಪೂಜೆ, ರಾತ್ರಿ ಪೂಜೆ ನಡೆಯಿತು.