Home ಧಾರ್ಮಿಕ ಸುದ್ದಿ ಕಾರಣಿಕ ಪ್ರಸಿದ್ಧ ಪಣೋಲಿಬೈಲು ದೈವಸ್ಥಾನ : ವರ್ಷಾವಧಿ ಕೋಲ, ಧಾರ್ಮಿಕ ಕಾರ್ಯಕ್ರಮ

ಕಾರಣಿಕ ಪ್ರಸಿದ್ಧ ಪಣೋಲಿಬೈಲು ದೈವಸ್ಥಾನ : ವರ್ಷಾವಧಿ ಕೋಲ, ಧಾರ್ಮಿಕ ಕಾರ್ಯಕ್ರಮ

1446
0
SHARE

ಬಂಟ್ವಾಳ : ಕಾರಣಿಕ ಪ್ರಸಿದ್ಧ ಸಜೀಪಮೂಡ ಗ್ರಾಮ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲ, ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನಡೆದವು. ತಡರಾತ್ರಿ ದೈವಗಳ ದರ್ಶನ, ಅಭಯ ಪ್ರದಾನ ಸಿರಿಮುಡಿ ಗಂಧಪ್ರಸಾದ ವಿತರಣೆ ನಡೆಯಿತು.

ಮಂಗಳೂರು ಸಹಾಯಕ ಆಯುಕ್ತ ಹಾಗೂ ಕ್ಷೇತ್ರದ ಆಡಳಿತಾಧಿಕಾರಿ ರವಿಚಂದ್ರ ನಾಯಕ್‌ ಮತ್ತು ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್‌ ನೇತೃತ್ವದಲ್ಲಿ ಧಾರ್ಮಿಕ ಪರಿಚಾರಕರಿಂದ ವಿವಿಧ ಕಾರ್ಯಗಳು ನಡೆದವು. ಊರ-ಪರವೂರ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನವಕ ಕಲಶ ಪ್ರದಾನ, 12 ತೆಂಗಿನಕಾಯಿಯ ಗಣಪತಿ ಹೋಮ, ನಾಗ ತಂಬಿಲ, ಸಾರ್ವಜನಿಕ ಅನ್ನಸಂತರ್ಪಣೆ, ಭಜನ ಕಾರ್ಯಕ್ರಮ, ಶ್ರೀಕೃಷ್ಣ ಭಜನ ಮಂದಿರ ಪಣೋಲಿಬೈಲ್‌ ನಿಂದ ಶ್ರೀಕ್ಷೇತ್ರಕ್ಕೆ ಮೆರವಣಿಗೆ, ಡ್ಯಾನ್ಸ್‌ ಕಾರ್ಯಕ್ರಮ, ಗೀತಾ ಸಾಹಿತ್ಯ ಸಂಭ್ರಮ, ಲಕುಮಿ ತಂಡ ಕುಸಲ್ದ ಕಲಾವಿದರು ಅಭಿನಯಿಸಿದ “ಮಂಗೆ ಮಲೊ³ಡಿc’ ನಾಟಕ, ತುಳುನಾಡ ಸಂಸ್ಕೃತಿ ವಿಶೇಷ ಕಾರ್ಯಕ್ರಮ ಬಳಿಕ ಕ್ಷೇತ್ರದಲ್ಲಿ ದೈವದ ವಾರ್ಷಿಕ ಕೋಲ ಸೇವೆ ನಡೆಯಿತು.

LEAVE A REPLY

Please enter your comment!
Please enter your name here