Home ಧಾರ್ಮಿಕ ಸುದ್ದಿ ಶ್ರೀ ನಂದನೇಶರ ದೇವಸ್ಥಾನದಲ್ಲಿ ಹುಗ್ಗಿಯ ಪ್ರಸಾದ ವಿಶೇಷ

ಶ್ರೀ ನಂದನೇಶರ ದೇವಸ್ಥಾನದಲ್ಲಿ ಹುಗ್ಗಿಯ ಪ್ರಸಾದ ವಿಶೇಷ

1248
0
SHARE

ಪಣಂಬೂರು : ಇಲ್ಲಿನ ಶ್ರೀ ನಂದನೇಶ್ವರ ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನವಾಗಿದ್ದು ರಾಷ್ಟ್ರೀಯ ಹೆದ್ದಾರಿ66ರ ಸಮೀಪವಿದೆ. ಹಿಂದಿನ ರಾಜ ಮಹಾರಾಜರು ಕೆತ್ತಿಸಿದ ಶಿಲಾಶಾಸನದಲ್ಲೂ ಪಣಂಬೂರು ದೇವಸ್ಥಾನದ ಉಲ್ಲೇಖವಿದೆ.

ಧಾರ್ಮಿಕ, ಸಾಂಸ್ಕೃತಿಕ, ಯಕ್ಷಗಾನದ ನೆಲೆಯಾದ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ಧನುರ್ಮಾಸದ ಪೂಜೆಯು ನಡೆದುಕೊಂಡು ಬಂದ ಪ್ರಕ್ರಿಯೆ. ಮಕರ ಸಂಕ್ರಮಣದಿಂದ ಜ.14ರವರೆಗೆ ಜರಗಲಿದೆ. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ನಂದನೇಶ್ವರನಿಗೆ ಪೂಜೆ ನಡೆಯುತ್ತದೆ. ನಿತ್ಯ ದೇವರಿಗೆ ಧನುರ್ಮಾಸದ ನೈವೇದ್ಯ, ಹುಗ್ಗಿಯ ಪ್ರಸಾದವನ್ನು ಅರ್ಪಣೆ ಮಾಡಲಾಗುತ್ತದೆ. ಬಳಿಕ ಮಧ್ಯಾಹ್ನ ಪೂಜೆಗೆ ವಿರಾಮ, ಅನಂತರ ರಾತ್ರಿಯ ನಿತ್ಯ ಪೂಜೆ ನೆರವೇರುತ್ತದೆ.

ಭಕ್ತರು ತಾವು ಧನುರ್ಮಾಸದ ಪ್ರಯುಕ್ತ ವಿಶೇಷ ಪೂಜೆ ಬರೆಸಿದಲ್ಲಿ
ಅವರ ಅಪೇಕ್ಷೆಯ ಮೇರೆಗೆ ಪೂಜೆ ನಡೆದು ಅನ್ನಪ್ರಸಾದದ ಸಮಾರಾಧನೆ ಜರಗುತ್ತದೆ. ನಂದನೇಶ್ವರ ದೇವಸ್ಥಾನದಲ್ಲಿ ವರ್ಷಾವ ಧಿ ಉತ್ಸವ ಫೆ. ತಿಂಗಳಲ್ಲಿ 8ರಿಂದ 16ರವರೆಗೆ 9 ದಿನಗಳ ಕಾಲ ಜರಗುತ್ತದೆ. ನಿತ್ಯ ಬಲಿ ಉತ್ಸವ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಹಗಲು ಮತ್ತು ರಾತ್ರಿ ರಥೋತ್ಸವ, ಅನ್ನಸಂತರ್ಪಣೆ ನೆರವೇರುತ್ತದೆ. ಈ ದೇವಸ್ಥಾನ ರಂಗ, ಸಾಹಿತ್ಯ ಕಲೆಗಳ ವೇದಿಕೆಯಾಗಿದ್ದು ಪ್ರತೀ ವರ್ಷ ಇಲ್ಲಿನ ರಾಜಾಂಗಣದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುವ ಸಲುವಾಗಿ ತರಬೇತಿ, ವಿವಿಧ ಕಲೆಗಳ ಪ್ರದರ್ಶನಕ್ಕೆ ಅವಕಾಶವಿದೆ. ಇಲ್ಲಿನ ಜನರು ಬಂದರಿಗಾಗಿ ಭೂಮಿ ತ್ಯಾಗ ಮಾಡಿರುವುದರಿಂದ ಜನವಸತಿ ಇಲ್ಲ. ಆದರೂ ಕೂಡ ಜಾತ್ರೆಯ ಸಂದರ್ಭ ಎಲ್ಲರೂ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆ.

ಇದಲ್ಲದೆ ಸುತ್ತಮುತ್ತಲಿನ ಗ್ರಾಮದ ಭಕ್ತರೂ ಆಗಮಿಸಿ ಅವರ ಸೇವೆ ಸಲ್ಲಿಸುತ್ತಾರೆ. ಶಿವರಾತ್ರಿ ಇಲ್ಲಿ ವಿಶೇಷ ಪೂಜೆಯೊಂದಿಗೆ ಜರಗುತ್ತದೆ. ವೈಭವದ ರಂಗ ಪೂಜೆ, ಲೋಕಕಲ್ಯಾಣಾರ್ಥವಾಗಿ ಸೀಯಾಳ ಅಭಿಷೇಕ ಸಹಿತ ಧಾರ್ಮಿಕ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರುತ್ತದೆ.

ಒಂದು ತಿಂಗಳಕಾಲ ಧನುರ್ಮಾಸದ ಪೂಜೆ ನಿತ್ಯ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಮಾಡುತ್ತೇವೆ. ದೇವರಿಗೆ ಹುಗ್ಗಿ ನೈವೇದ್ಯ ವಿಶೇಷ. ಇದರೊಂದಿಗೆ ಭಕ್ತರು ಸಹಕಾರ ಹಾಗೂ ಅವರು ಬಯಸಿದಲ್ಲಿ ವಿಶೇಷ ಸಮಾರಾಧನೆಯೂ ಇರುತ್ತದೆ. ಆದರೆ ನಿತ್ಯ ಪೂಜೆಯೊಂದಿಗೆ ಧನುಮಾರ್ಸದ ವಿಧಾನಗಳ ಮೂಲಕ ಮಾಡುತ್ತೇವೆ.
ಅನಂತನಾರಾಯಣ ಮಯ್ಯ
ಪ್ರಧಾನ ಅರ್ಚಕರು

LEAVE A REPLY

Please enter your comment!
Please enter your name here