Home ಧಾರ್ಮಿಕ ಸುದ್ದಿ ಪಂಜುರ್ಲಿ, ಪರಿವಾರ ದೈವಗಳ ಪ್ರತಿಷ್ಠೆ

ಪಂಜುರ್ಲಿ, ಪರಿವಾರ ದೈವಗಳ ಪ್ರತಿಷ್ಠೆ

838
0
SHARE

ಉಡುಪಿ: ಸಾರ್ವಜನಿಕ ಶ್ರೀ ಸತ್ಯಸಾರಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರ ಸಮಿತಿ ಇಂದಿರಾನಗರ ಕರಿಯಕಲ್ಲು ಸಾಣೂರು ಕಾರ್ಕಳ ಇದರ ಬ್ರಹ್ಮದೇವರ ಹಾಗೂ ಪರಿವಾರ ಶಕ್ತಿಗಳ ಪ್ರತಿಷ್ಠೆ, ಬ್ರಹ್ಮದೇವರಿಗೆ 108 ಕಲಶಗಳ ಕುಂಭಾಭಿಷೇಕ ಕಾರ್ಯಕ್ರಮವು ಫೆ.16ರಿಂದ 17ರವರೆಗೆ ಆನೆಕೆರೆ ಶ್ರೀಕೃಷ್ಣ ಕ್ಷೇತ್ರ ಪ್ರಧಾನ ಅರ್ಚಕ ಸದಾನಂದ ಶಾಂತಿ ಇವರ ಉಪಸ್ಥಿತಿಯಲ್ಲಿ ಸಾನ್ನಿಧ್ಯ ಅರ್ಚಕ ಕೆ. ಕಿಶೋರ ಶಾಂತಿ ನೇತೃತ್ವದಲ್ಲಿ ನಡೆಯಲಿದೆ. ಫೆ.16ರಂದು ಸಂಜೆ 5.30ರಿಂದ ತೋರಣ ಮುಹೂರ್ತ, ಗುರು ಗಣಪತಿ ಪೂಜೆ, ಭದ್ರ ದೀಪ ಪ್ರಜ್ವಲನೆ, ಸಾಮೂಹಿಕ ಪ್ರಾರ್ಥನೆ ಆಲಯ ಪರಿಗ್ರಹ ಶಿಲ್ಪ ಪೂಜೆ, ವಾಸ್ತು ಪೂಜೆ, ಹೋಮ, ದಿಕ್ಬಾಲ ಬಲಿ, ಸುದರ್ಶನ ಹೋಮ, ಬ್ರಹ್ಮ ಮಂಡಲ ಆರಂಭ ನಡೆಯಲಿದೆ.

ಫೆ.17ರಂದು ಗಣಪತಿ ಹೋಮ, ಬ್ರಹ್ಮ ಮಂಡಲ ಪೂಜೆ, ಕುಂಭ ಸ್ಥಾಪನೆ, ಬಿಂಬ ಶುದ್ಧಿ, ಶಿಖರ ಪ್ರತಿಷ್ಠೆ,ಬೆಳಗ್ಗೆ 8.44ಗಂಟೆಗೆ ಕರ್ಕಾಟಕ ಲಗ್ನದಲ್ಲಿ ಬ್ರಹ್ಮ ದೇವರಿಗೆ ಮತ್ತು ಪರಿವಾರ ಶಕ್ತಿಗಳ ಪ್ರತಿಷ್ಠೆ , ಪ್ರತೀಷ್ಠಾ ಹೋಮ, ನವಕ ಪ್ರದಾನ ಹೋಮ , ಕುಂಭಾಭಿಷೇಕ,ನವಕ ಕಲಾಶಾಭಿಷೇಕ, ಹಲೇರಾ ಪಂಜುರ್ಲಿ ದರ್ಶನ , ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here