Home ಧಾರ್ಮಿಕ ಸುದ್ದಿ ಪಂಜ: ಸೀಮೆ ದೇಗುಲದ ವರ್ಷಾವಧಿ ಜಾತ್ರೆ

ಪಂಜ: ಸೀಮೆ ದೇಗುಲದ ವರ್ಷಾವಧಿ ಜಾತ್ರೆ

1588
0
SHARE

ಸುಬ್ರಹ್ಮಣ್ಯ: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಫೆ. 1ರಿಂದ 6ರ ವರೆಗೆ ನಡೆಯಲಿದೆ.
ಫೆ. 1ರಂದು ರಾತ್ರಿ ಧ್ವಜಾರೋಹಣ ನಡೆದು ಫೆ. 2ರಂದು ನಿತ್ಯ ಬಲಿ, ಫೆ. 3ರಂದು ಪಂಜ ಸತ್ಯಕಟ್ಟೆಂದು ಹಸುರು ಕಾಣಿಕೆ ಮೆರವಣಿಗೆ ನಡೆದು ದೇವಾಲಯಕ್ಕೆ ಸಮರ್ಪಣೆ ಆಗಲಿದೆ. ಅಂದು ಹಗಲು ನಿತ್ಯ ಬಲಿ ಮತ್ತು ದಂಡಮಾಲೆ ಹಾಕಿ ಬಲಿ ಹೊರಡುವುದು, ಉಗ್ರಾಣ ತುಂಬಿಸುವ ಕಾರ್ಯಕ್ರಮವಿದೆ. ಫೆ. 4ರಂದು ಹಗಲು ಬೈಗಿನ ಬಲಿ, ರಾತ್ರಿ ಉತ್ಸವ. ಫೆ. 5ರಂದು ಹಗಲು ದರ್ಶನ ಬಲಿ ಬಳಿಕ ಬಟ್ಟಲು ಕಾಣಿಕೆ ಪ್ರಸಾದ ವಿತರಣೆ, ರಾತ್ರಿ ದೀಪೋತ್ಸವ, ದೈವಗಳ ನೇಮ ಜರುಗಲಿದೆ.

ಫೆ. 6ರಂದು ಹಗಲು ಬಲಿ ಹೊರಟು ಉತ್ಸವ, ರಾತ್ರಿ ಬ್ರಹ್ಮರಥೋತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ, ದೈವಗಳ ನೇಮ ಜರುಗಲಿದೆ. ಫೆ. 7ರಂದು ಹಗಲು ಕವಾಟೋದ್ಘಾಟನೆ, ಅಭಿಷೇಕ ಮತ್ತು ರಾತ್ರಿ ಬಲಿ ಹೊರಟು ಅವಭೃಥ ಸ್ನಾನ ನಡೆಯಲಿದೆ. ಧ್ವಜಾವರೋಹಣ ಅನಂತರ ಮೂಲಸ್ಥಾನ ಗರಡಿಬೈಲು ಎಂಬಲ್ಲಿ ದೈವಗಳ ನೇಮ ಜರಗಲಿದೆ. ಫೆ. 8ರಂದು ಬೆಳಗ್ಗೆ ಸಂಪ್ರೋಕ್ಷಣೆ, ಮಂತ್ರಾಕ್ಷತೆ ರಾತ್ರಿ ಪುತ್ಯ ಶಿರಾಡಿ ದೈವದ ಭಂಡಾರ ಬರುವುದು, ಫೆ. 9ರಂದು ಅಮ್ಮನವರ ಪೂಜೆ ಮತ್ತು ಶಿರಾಡಿ ದೈವದ ನೇಮ ಜರಗಲಿದೆ. ಫೆ. 17ರಂದು ರಂಗಪೂಜೆ, ಫೆ. 18ರಂದು ರಾತ್ರಿ ಆದಿ ಬೈದರ್ಕಳ ನೇಮ ನಡೆಯಲಿದೆ.

ಯಕ್ಷಗಾನ ಬಯಲಾಟ
ಫೆ. 5ರಂದು ಸಂಜೆ 7ರಿಂದ ರಾತ್ರಿ 12ರ ತನಕ ದೇವಸ್ಥಾನದ ವಠಾರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ. ಫೆ. 6ರಂದು ಸಂಜೆ 7ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ಎಂಬ ಯಕ್ಷಗಾನ ಬಯಲಾಟ ‘ಮಾಯಾವಿಹಾರಿ’ ಪ್ರದರ್ಶನಗೊಳ್ಳಲಿದೆ.

ಫೆ. 6ರಂದು ಬಸ್‌ ವ್ಯವಸ್ಥೆ
ಫೆ. 6ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವ ಪ್ರಯುಕ್ತ ಕಲ್ಮಡ್ಕ, ಬೀದಿಗುಡ್ಡೆ, ನಿಂತಿಕಲ್ಲು, ಯೇನೆಕಲ್ಲು, ಕಡಬ, ಸುಬ್ರಹ್ಮಣ್ಯ, ಗುತ್ತಿಗಾರು, ಕುಕ್ಕುಜಡ್ಕ, ಬೆಳ್ಳಾರೆ, ಕಾಣಿಯೂರು, ಎಡಮಂಗಲ, ಪಂಬೆತ್ತಾಡಿಯಿಂದ ಸರಕಾರಿ ಬಸ್ಸಿನ ವ್ಯವಸ್ಥೆ ಇದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಗೊನೆ ಮುಹೂರ್ತ ಜರಗಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಗೋಪಾಲಕೃಷ್ಣ ಭಟ್, ಸಮಿತಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.

ಗೊನೆ ಮುಹೂರ್ತ
ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಗೊನೆ ಮುಹೂರ್ತ ಜರಗಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಗೋಪಾಲಕೃಷ್ಣ ಭಟ್, ಸಮಿತಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here