Home ಧಾರ್ಮಿಕ ಸುದ್ದಿ ಪಂಜ ದೇವಾಲಯ: ರಥೋತ್ಸವ ಸಂಪನ್ನ

ಪಂಜ ದೇವಾಲಯ: ರಥೋತ್ಸವ ಸಂಪನ್ನ

327
0
SHARE
ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಪ್ರಯುಕ್ತ ರಥೋತ್ಸವ ನಡೆಯಿತು.

ಸುಬ್ರಹ್ಮಣ್ಯ :ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಪ್ರಯುಕ್ತ ರಥೋತ್ಸವ ನೆರವೇರಿತು.

ಫೆ. 6ರಂದು ಹಗಲು ಬಲಿ ಹೊರಟು ಉತ್ಸವ ನಡೆಯಿತು. ಬಳಿಕ ರಾತ್ರಿ ಬ್ರಹ್ಮರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರು ಭಾಗವಹಿಸಿ ರಥೋತ್ಸವ ವೀಕ್ಷಿಸಿದರು. ಬಳಿಕ ಭೂತಬಲಿ, ಶಯನೋತ್ಸವ, ಕವಾಟ ಬಂಧನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಬುಧವಾರ ಹಗಲು ಕಪಾಟೋದ್ಘಾಟನೆ ಹಾಗೂ ಅಭೀಷೇಕ ನೆರವೇರಿತು.

ಮಂಗಳವಾರ ಹಗಲು ದರ್ಶನ ಬಲಿ, ಬಳಿಕ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ ದೀಪೋತ್ಸವ ನಡೆಯಿತು. ರಾತ್ರಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಸುದರ್ಶನ ವಿಜಯ ರತಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ದೇಗುಲದ ಆಡಳಿತ ಮಂಡಳಿ ಸದಸ್ಯರು ಹಾಗೂ ಸೀಮೆಯ ಭಕ್ತರು ಉಪಸ್ಥಿತರಿದ್ದರು.

ಬಸ್ಸಿನ ವ್ಯವಸ್ಥೆ
ಮಂಗಳವಾರ ರಾತ್ರಿ ಶ್ರೀದೇವರ ರಥೋತ್ಸವದ ಬಳಿಕ ಬೀದಿಗುಡ್ಡೆ, ನಿಂತಿಕಲ್ಲು, ಯೇನೆಕಲ್ಲು, ಕಡಬ, ಸುಬ್ರಹ್ಮಣ್ಯ, ಗುತ್ತಿಗಾರು, ಕುಕ್ಕುಜಡ್ಕ, ಬೆಳ್ಳಾರೆ, ಕಾಣಿಯೂರು, ಎಡಮಂಗಲ, ಕಲ್ಮಡ್ಕ, ಎಡಮಂಗಲ, ಪಂಬೆತ್ತಾಡಿ ಊರುಗಳಿಗೆ ತೆರಳುವ ಭಕ್ತರಿಗೆ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here