ಪಂಜ : ನಮ್ಮದೇ ಆದ ಪವಿತ್ರ ಭಾಷೆಯಿಂದ ಸಂಬಂಧಗಳನ್ನು, ಹೆಸರುಗಳನ್ನು ಕರೆಯಿರಿ. ಅಪ್ಪ ಅಮ್ಮ ಪದ ಬಳಕೆಯಲ್ಲಿರಲಿ ಹೊರತು ಮಮ್ಮಿ ಡ್ಯಾಡಿ ಬೇಡ. ಇದೆಲ್ಲದರ ಸಹಿತ ದುರ್ಗುಣ ಬದಲಾಯಿಸಿಕೊಳ್ಳದವನು ಶ್ರೀದೇವರಿಗೆ ನೀಡುವ ಪೂಜೆಗಳು ಸಾರ್ಥಕವಾಗದು ಎಂದು ತುಳುನಾಡ ತುಳುವ ಬೊಳ್ಳಿ ದಯಾನಂದ ಕತ್ತಲ್ಸಾರ್ ಹೇಳಿದರು. ಪಂಜ ಶ್ರೀಶಾರದಾಂಬಾ ಭಜನ ಮಂಡಳಿ ಮತ್ತು ಶ್ರೀಶಾರದೋತ್ಸವ ಸಮಿತಿ ಆಶ್ರಯದಲ್ಲಿ ನಡೆದ ಶಾರದೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ಪ್ರಾಣಿಗಳೂ ಸ್ವೀಕರಿಸುವುದಿಲ್ಲ
ಪ್ರಾಣಿಗಳಿಗೆ ಚಿನ್ನದ ಬಟ್ಟಲಿನಲ್ಲಿ ಬೀಡಿ, ಸಿಗರೇಟು, ಗಾಂಜಾ, ಸಾರಾಯಿ ಹಾಕಿದರೆ ಅದು ಸ್ವೀಕರಿಸುವುದಿಲ್ಲ. ಅದನ್ನು ಸೇವಿಸಿದರೆ ಅದರ ದೇಹಕ್ಕೆ ಅಪಾಯವಿದೆ ಎಂದು ಅದಕ್ಕೆ ಅರಿವಿದೆ. ಆದರೆ ಅದೇ ಆ ಬುದ್ದಿ ಮನುಷ್ಯನಿಗೆ ಏಕಿಲ್ಲ. ದೈವ, ದೇವರಿಗೆ, ಭೂತಗಳಿಗೆ ಸಾರಾಯಿ, ಶೇಂದಿ ಇಡಲು ಎಲ್ಲೂ ಉಲ್ಲೇಖವಿಲ್ಲ. ಅದರ ಬದಲಾಗಿ ಹಾಲು, ಜೇನು ತುಪ್ಪವಿಡಿ. ದುಷ್ಚಟಗಳನ್ನು ಬಿಟ್ಟು ಉತ್ತಮ ಸಮಾಜ ನಿರ್ಮಿಸುವ ಎಂದರು. ಅಧ್ಯಕ್ಷತೆಯನ್ನು ಶ್ರೀಶಾರದೋತ್ಸವ ಸಮಿತಿ ಅಧ್ಯಕ್ಷ ನೇಮಿರಾಜ್ ಪಲ್ಲೋಡಿ ವಹಿಸಿದ್ದರು. ಶ್ರೀಶಾರದಾಂಬಾ ಭಜನ ಮಂಡಳಿ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಪಂಜ ಸಿಆರ್ಪಿ ಯಶೋಧರ ಕೆ. ಅವರಿಗೆ ಸಮ್ಮಾನ ಜರಗಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೇನ್ಯ ರವೀಂದ್ರನಾಥ್ ಶೆಟ್ಟಿ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು. ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಜಾಕೆ ಮಾಧವ ಗೌಡ, ಶ್ರೀ ಶಾರದಾಂಬಾ ಭಜನ ಮಂಡಳಿ ಗೌರವಾಧ್ಯಕ್ಷ ಬಿ.ಎಂ. ಆನಂದ ಗೌಡ, ಅಧ್ಯಕ್ಷ ಬಾಲಕೃಷ್ಣ ಪುತ್ಯ, ಕಾರ್ಯದರ್ಶಿ ಪೂವಪ್ಪ ಚಿದ್ಗಲ್, ಉತ್ಸವ ಸಮಿತಿ ಕಾರ್ಯದರ್ಶಿ ಜಯರಾಮ ಕಲ್ಲಾಜೆ ಉಪಸ್ಥಿತರಿದ್ದರು. ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಪ್ರಾರ್ಥಿಸಿದರು. ಉತ್ಸವ ಸಮಿತಿಯ ಉಪಾಧ್ಯಕ್ಷ ಕೃಷ್ಣ ವೈಲಾಯ ಸ್ವಾಗತಿಸಿದರು. ಸೋಮಶೇಖರ ನೇರಳ ನಿರೂಪಿಸಿದರು. ಜಯರಾಮ ಕಲ್ಲಾಜೆ ವಂದಿಸಿದರು.
ಉದ್ಘಾಟನೆ
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಛಲಪತಿ ಕೆ.ವಿ. ಸಾಂಸ್ಕೃತಿಕ ಸ್ಪರ್ಧೆಯನ್ನು ಮತ್ತು ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು ಕ್ರೀಡಾ ಸ್ಪರ್ಧೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಉತ್ಸವ ಸಮಿತಿ ಅಧ್ಯಕ್ಷ ನೇಮಿರಾಜ್ ಪಲ್ಲೋಡಿ ವಹಿಸಿದ್ದರು. ಭಜನ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಉತ್ಸವ ಸಮಿತಿ ಕಾರ್ಯದರ್ಶಿ ಜಯರಾಮ ಕಲ್ಲಾಜೆ ಉಪಸ್ಥಿತರಿದ್ದರು. ಶ್ಯಾಮ್ ಕೃಷ್ಣನಗರ ಪ್ರಾರ್ಥಿಸಿದರು. ಉತ್ಸವ ಸಮಿತಿ ಕೋಶಾಧ್ಯಕ್ಷ ಪ್ರಕಾಶ್ ಜಾಕೆ ಸ್ವಾಗತಿಸಿದರು. ಸೋಮಶೇಖರ ನೇರಳ ನಿರೂಪಿಸಿದರು. ಪೂವಪ್ಪ ಚಿದ್ಗಲ್ ವಂದಿಸಿದರು.
ಮಧ್ಯಾಹ್ನದ ಬಳಿಕ ಶ್ರೀ ಶಾರದಾಂಬಾ ಯಕ್ಷಗಾನ ಸೇವಾಟ್ರಸ್ಟ್ ಆಶ್ರಯದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಯಕ್ಷಗಾನ ಧಕ್ಷಧ್ವರ-ಜಾಂಬವತಿ ಕಲ್ಯಾಣ ಪ್ರದರ್ಶನಗೊಂಡಿತ್ತು. ರಾತ್ರಿ ಶ್ರೀ ಶಾರದಾಮಾತೆಯ ವೈಭವದ ಶೋಭಾಯಾತ್ರೆಗೆ ಪ್ರಗತಿಪರ ಕೃಷಿಕ ಶಿವರಾಮಯ್ಯ ಕಮಾಝೆ, ಉತ್ಸವ ಸಮಿತಿ ಅಧ್ಯಕ್ಷ ನೇಮಿರಾಜ್ ಪಲ್ಲೋಡಿ, ಉಪಾಧ್ಯಕ್ಷ ಕೃಷ್ಣ ವೈಲಾಯ ಅವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.
ಶೋಭಾಯಾತ್ರೆ ಆಕರ್ಷಣೆ
ಕಲ್ಲಡ್ಕದ ಆಕರ್ಷಕ ಟ್ಯಾಬ್ಲೊ ದೇನುಕಾಸುರ ವಧೆ, ತಾಲೀಮು ಪ್ರದರ್ಶನ, ಚೆಂಡೆವಾದನ, ನೃತ್ಯ ಭಜನೆ, ಹುಲಿವೇಷ ಕುಣಿತ ಶೋಭಾಯಾತ್ರೆಯಲ್ಲಿ ಆಕರ್ಷಣೆಯಾಗಿತ್ತು. ಪಂಜ ಹೊಳೆಯ ನಾಗತೀರ್ಥ ಸಂಗಮ ಪಲ್ಲೋಡಿಯಲ್ಲಿ ಜಲಸ್ತಂಭನಗೊಂಡಿತು.
ಪ್ರತಿಭಾ ಪುರಸಾರ
ಪಂಜ ಕ್ಲಸ್ಟರಿನ ಒಂಬತ್ತು ಶಾಲೆಗಳ ಆಯ್ದ ಒಂಬತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೋಟೆಗುಡ್ಡೆ ಶಾಲೆಯ ರಾಜೇಶ್ ಸಿ., ಕೂತ್ಕುಂಜ ಶಾಲೆಯ ಕೌಶಿಕ್ ರಾಮ್, ಕಲ್ಮಡ್ಕ ಶಾಲೆಯ ಆಜ್ಞಾಶ್ರೀ ಡಿ., ಪಡಿ³ನಂಗಡಿ ಶಾಲೆಯ ಮಹಮ್ಮದ್, ನಾಗತೀರ್ಥ ಶಾಲೆಯ ಪ್ರೀತಿ ಪಿ., ಕರಿಕ್ಕಳ ಶಾಲೆಯ ಹರ್ಷಿತ್ ಕುಮಾರ್, ಪಂಜ ಶಾಲೆಯ ಇಂಚರ, ಪಾಂಡಿಗದ್ದೆ ಶಾಲೆಯ ಜೀವಿತಾ ಕೆ., ಪಂಬೆತ್ತಾಡಿ ಶಾಲೆಯ ರತನ್ ಎಂ. ಪುರಸ್ಕೃತರು. ವಿಗ್ರಹವನ್ನು ಶೋಭಾಯಾತ್ರೆಯಲ್ಲಿ ಕೊಂಡೊಯ್ದು ಜಲಸ್ತಂಭನಗೊಳಿಸಲಾಯಿತು.