ಸುಬ್ರಹ್ಮಣ್ಯ : ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಪರಿವಾರ ದೈವಗಳ ನೂತನ ಸಂಪೂರ್ಣ ಶಿಲೆಕಲ್ಲಿನಿಂದ ತಾಮ್ರದ ಹೊದಿಕೆಯ ಮಾಡಿನಿಂದ ಅಪೂರ್ವವಾಗಿ ನಿರ್ಮಾಣವಾಗಿರುವ ಶ್ರೀ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಅವಳಿ ದೈವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶವು ಜ. 19 ಮತ್ತು 20ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದೈವಗಳ ಪ್ರತಿಷ್ಠಾ ಬ್ರಹ್ಮಕಲಶವು ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಿತು.
ಜ. 19ರ ರಾತ್ರಿ ದೇವತಾ ಪ್ರಾರ್ಥನೆ, ಆಚಾರ್ಯವರಣೆ, ಪ್ರಸಾದ ಪರಿಗ್ರಹ, ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಅಘೋರ ಹೋಮ, ವಾಸ್ತುಹವನ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಪೂಜಾ ಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ ಜ. 20ರ ಬೆಳಗ್ಗೆ ಮಹಾಗಣಪತಿ ಹೋಮ, ತಿಲಾಹೋಮ, ವಿಷ್ಣು ಸಾಯುಜ್ಯ ಹೋಮ, ಬ್ರಹ್ಮ ಕಲಶ ಪೂಜೆ, ಕುಂಭಲಗ್ನ ಶುಭ ಮುಹೂರ್ತದಲ್ಲಿ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಬೆಳಗ್ಗೆ ದೇಗುಲದಲ್ಲಿ ನೂರಕ್ಕೂ ಮಿಕ್ಕಿದ ಭಕ್ತರಿಂದ ಮಹಾ ರುದ್ರಪಾರಾಯಣ ವಿಶೇಷ ಸೇವೆ ನಡೆಯಿತು. ರಾತ್ರಿ ಉಳ್ಳಾಕುಲು, ಕಾಚುಕುಜುಂಬ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ನೇಮ ನಡೆಯಿತು. ದೈವಜ್ಞ ಮಧೂರು ನಾರಾಯಣ ರಂಗ ಭಟ್, ವಾಸ್ತು ಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ, ಮಹಾದಾನಿಗಳಾದ ಹೆಬ್ಟಾರಹಿತ್ಲು ರಾಮಚಂದ್ರ ಜೋಯಿಸ ಮತ್ತು ಮನೆಯವರು, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಗೋಪಾಲಕೃಷ್ಣ ಭಟ್, ವ್ಯವಸ್ಥಾಪನ ಸಮಿತಿ ಸದಸ್ಯರು, ಉತ್ಸವ ಸಮಿತಿಯವರು, ಸೀಮೆಯ ಭಕ್ತರು ಪಾಲ್ಗೊಂಡಿದ್ದರು.