Home ಧಾರ್ಮಿಕ ಸುದ್ದಿ ಪಾಂಗಳಾಯಿ ದೈವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ

ಪಾಂಗಳಾಯಿ ದೈವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ

1929
0
SHARE

ಪರ್ಲಡ್ಕ : ಇಲ್ಲಿನ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ಶನಿವಾರ ರಾತ್ರಿ ನಡೆಯಲಿರುವ ಶ್ರೀ ದೈವಗಳ ನೇಮದ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ ಅವರ ನೇತೃತ್ವದಲ್ಲಿ ನಡೆದವು.

ಬೆಳಗ್ಗೆ ದೈವಸ್ಥಾನದಲ್ಲಿ ಗಣಹೋಮ, ನಾಗತಂಬಿಲ, ಪಂಚಾಮೃತ ಅಭಿಷೇಕ, ಶ್ರೀ ದೈವಗಳಿಗೆ ಕಲಶ ತಂಬಿಲ ಸೇವೆ, ಸಾಮೂಹಿಕ ಆಶ್ಲೇಷಾ ಬಲಿ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ ನಡೆಯಿತು. ವಾರ್ಷಿಕ ನೇಮದ ಅಂಗವಾಗಿ ದೈವಸ್ಥಾನದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಸಂಪತ್‌ ಕುಮಾರ್‌ ಬಿ., ವಿನಯ ಭಂಡಾರಿ, ತಾರಾನಾಥ ರೈ, ಉತ್ಸವ ಸಮಿತಿಯ ವೆಂಕಟರಮಣ ನಾಯಕ್‌, ಉದಯ ಶಂಕರ ರೈ, ಸಂತೋಷ್‌ ಬೋನಂತಾಯ, ನಗರಸಭಾ ಸದಸ್ಯೆ ವಿದ್ಯಾ ಆರ್‌. ಗೌರಿ, ಸರೋಜಿನಿ ಅಭಿಕಾರ್‌ ಪಾಲ್ಗೊಂಡರು.

LEAVE A REPLY

Please enter your comment!
Please enter your name here