ಕಾಪು: ಮುಕ್ಕಾಲಿ ಅಣ್ಣು ಶೆಟ್ಟಿ ಕುಟುಂಬಸ್ಥರ ಆಡಳಿತದಲ್ಲಿರುವ ಪಾಂಗಾಳ ಆದಿ ಆಲಡೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಉಂಡಾರು ನಾಗರಾಜ ತಂತ್ರಿ ಇವರ ನೇತೃತ್ವದಲ್ಲಿ ಫೆ. 25ರಂದು ಬ್ರಹ್ಮಕಲಶಾಭಿಷೇಕ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಬೆಳಗ್ಗೆ 10.30ರಿಂದ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ, ಸಾರ್ವಜನಿಕ ಅನ್ನಸಂತರ್ಪಣೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.
ಕ್ಷೇತ್ರದ ಅಧ್ಯಕ್ಷ ಅಣ್ಣಯ್ಯ ಕೆ. ಶೆಟ್ಟಿ, ಮುಕ್ಕಾಲಿ ಕೋಶಾಧಿಕಾರಿ ರಮಾನಂದ ಎನ್. ಶೆಟ್ಟಿ, ಉಪಾಧ್ಯಕ್ಷರಾದ ಕುಟ್ಟಿ ಶೆಟ್ಟಿ, ವಿನಯ ಶೆಟ್ಟಿ, ಕಾರ್ಯದರ್ಶಿಗಳಾದ ಶಾಂತಾರಾಮ ಶೆಟ್ಟಿ, ರವಿವರ್ಮ ಶೆಟ್ಟಿ, ಜೊತೆ ಕೋಶಾಧಿಕಾರಿ ದೀಪಕ್ ಶೆಟ್ಟಿ, ರಮೇಶ್ ಶೆಟ್ಟಿ ಮುಂಬಯಿ, ಚಂದ್ರಹಾಸ ಗುರುಸ್ವಾಮಿ, ಉಮೇಶ್ ಶೆಟ್ಟಿ ಸಾಂಗ್ಲಿ, ಸಮಿತಿಯ ಪದಾಧಿಕಾರಿಗಳು, ಸೇವಾ ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು, ಆದಿ ಭಜಕರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.