ಬಂಟ್ವಾಳ: ಸಮಾಜವು ಶೈಕ್ಷಣಿಕ, ಧಾರ್ಮಿಕ, ಆರ್ಥಿಕವಾಗಿ ಸದೃಢವಾಗಲು ಭಗವಂತನ ಅನುಗ್ರಹ ಇರಬೇಕು. ಗುರುಗಳ ಆಶೀರ್ವಾದ ಇರಬೇಕು ಎಂದು ಗಾಣಿಗ ಸಮಾಜದ ಕುಲಗುರು ಕುಂದಾಪುರ ವ್ಯಾಸರಾಯ ಮಠ ಬೆಂಗಳೂರಿನ ಶ್ರೀ ಲಕ್ಷ್ಮೀನ್ದ್ರ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಬುಧವಾರ ಬಂಟ್ವಾಳ ತಾ| ಗಾಣಿಗರ ಸೇವಾ ಸಂಘದ ಆಶ್ರಯದಲ್ಲಿ ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ನಡೆದ ಪಾದುಕಾ ಪೂಜೆ, ಮುದ್ರಾಧಾರಣೆ, ಪ್ರವಚನ, ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಾನವ ಜನ್ಮ ಪೂರ್ವಪುಣ್ಯದ ಕರ್ಮದಿಂದ ಸಿಗುವಂತಾದ್ದು. ಗುರುಗಳ ಮಾರ್ಗದರ್ಶನದಲ್ಲಿ ಜೀವನ ನಡೆಸಿದವರಿಗೆ ಭಗವಂತನ ಕೃಪೆ ದೊರೆಯುವುದು. ಸರ್ವರ ಅಭಿವೃದ್ಧಿಯಿಂದ ಸಮಾಜದಲ್ಲಿ ಸುಖಶಾಂತಿ ನೆಲೆಸುತ್ತದೆ ಎಂದು ಹರಸಿದರು.
ಇದೇ ಮೊದಲಾಗಿ ಸಮಾಜದ ಬಂಧುಗಳ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಂತಸವಾಗಿದೆ. ಸಂಘಟನೆಯ ಮೂಲಕ ನಾವು ಬೆಳೆಯಬೇಕು. ಸಮಾಜವನ್ನು ಕಟ್ಟುವಲ್ಲಿ ಯುವಕರು ಮುಂದೆ ಬರಬೇಕು. ಹಿರಿಯರನ್ನು ಕೂಡಿಕೊಂಡು ಮುನ್ನಡೆಯಿರಿ ಎಂದು ಹಾರೈಸಿದರು.
ಪಾದುಕಾ ಸೇವೆ
ಗುರುಗಳಿಗೆ 104 ಮಂದಿ ಪಾದುಕಾ ಸೇವೆ ಮಾಡಿದರು. ಮುದ್ರಾಧಾರಣೆಯನ್ನು ಇದೇ ಸಂದರ್ಭ ಮಾಡಲಾಯಿತು. ಮುಂಜಾನೆ ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಸ್ಥಾನದಿಂದ ಸ್ವಾಮೀಜಿ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಬಿಜೆಪಿ ನೇತಾರ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಜಿ.ಪಂ. ಸದಸ್ಯೆ ಮಂಜುಳಾ ಮಾವೆ, ಮಮತಾ ಡಿ.ಎಸ್. ಗಟ್ಟಿ , ಗಣೇಶ ಸೋಮಯಾಜಿ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಪಿ. ರಘು ಸಪಲ್ಯ, ಕುಂದಾಪುರ ವ್ಯಾಸರಾದ ಮಠದ ಪ್ರಬಂಧಕ ಸುಧೀರ್ ಪಂಡಿತ್, ಉಳ್ಳಾಲ ಗಾಣಿಗ ಸಂಘದ ಅಧ್ಯಕ್ಷ ಎಚ್. ಪ್ರಕಾಶ ಕೊಲ್ಯ, ಪ್ರಮುಖರಾದ ವಿಶ್ವಾಸ್ ಕುಮಾರ್ ದಾಸ್, ಹರಿರಾಮಚಂದ್ರ, ಲಕ್ಷ್ಮಣ ಸಪಲ್ಯ, ಪ್ರತಾಪ್ ಬೆಟಕೇರಿ, ಪ್ರದೀಶ್ ಅಂಜರೆ, ಸ್ಥಳೀಯ ಪದಾಧಿಕಾರಿಗಳಾದ ತಿಮ್ಮಪ್ಪ ಇಡ್ಕಿದು, ನರ್ಸಪ್ಪ ಅಮೀನ್, ನಾಗೇಶ ಕಲ್ಲಡ್ಕ, ಕುಸುಮಾವತಿ ದರಿಬಾಗಿಲು, ದಿನೇಶ್ ಬಂಗೇರ ಬೋಳಂತೂರು, ಕಮಲಾಕ್ಷ ಶಂಭೂರು, ಲತಾ ಮೆಲ್ಕಾರ್, ಸಂದೀಪ್ ಕುಮಾರ್ ಎ., ಉಮೇಶ ಪಾಣೆಮಂಗಳೂರು, ನಾರಾಯಣ ಸಪಲ್ಯ ಕಡೇಶಿವಾಲಯ ಮೊದಲಾದವರು ಉಪಸ್ಥಿತರಿದ್ದರು.