ಕಡಬ : ಇಲ್ಲಿನ ಪಣೆಮಜಲು ಶ್ರೀ ಸಬ್ಬಮ್ಮ ದೇವಿ ಸನ್ನಿಧಿಯಲ್ಲಿ ಕೆಂಚಭಟ್ರೆ ಶ್ರೀ ಸುಬ್ರಹ್ಮಣ್ಯ ಬೈಪಾಡಿತ್ತಾಯರ ನೇತೃತ್ವದಲ್ಲಿ ಶ್ರೀ ನಾಗದೇವರಿಗೆ ತಂಬಿಲ, ಶ್ರೀ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ, ದೈವಗಳ ನೇಮ ಜರಗಿತು.
ಸೋಮವಾರ ಸಂಜೆ ದೈವಗಳ ಭಂಡಾರ ಚಾವಡಿಯಿಂದ ಭಂಡಾರ ಇಳಿಸಿ ಮಾಲ್ಯೆ ಮಾಡದಲ್ಲಿ ಭಂಡಾರ ಏರಿದ ಬಳಿಕ ರಾತ್ರಿ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಮಲೆ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳ ನೇಮ ನಡೆಯಿತು. ಮಂಗಳವಾರ ಬೆಳಗ್ಗೆ ಶ್ರೀ ಮಲೆ ಚಾಮುಂಡಿ ಪ್ರಧಾನಿ ದೈವದ ನೇಮ, ಹರಿಕೆ ಸಲ್ಲಿಕೆ ಹಾಗೂ ಗಡಿಗೆ ಹೋಗುವ ಕಾರ್ಯಕ್ರಮ ಜರಗಿತು. ಮಧ್ಯಾಹ್ನ ಕಡಬದ ಪಂಜುರ್ಲಿ ದೈವದ ನೇಮ ನಡೆದು ಅಪರಾಹ್ನ ಭಂಡಾರವು ಭಂಡಾರ ಚಾವಡಿಗೆ ಹಿಂದಿರುಗುವ ಪ್ರಕ್ರಿಯೆ ನಡೆಯಿತು.
ಮುಖ್ಯಸ್ಥ ಜನಾರ್ದನ ಗೌಡ ಪಣೆಮಜಲು, ಕಡಬಗುತ್ತು ರಾಜೇಂದ್ರ ಹೆಗ್ಡೆ, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ನಿವೃತ್ತ ಕೃಷಿ ಅಧಿಕಾರಿ ಪರಶುರಾಮ ಗೌಡ, ಬಿಳಿನೆಲೆ ಪಿಡಿಒ ಪದ್ಮನಾಭ ಪಳ್ಳಿಗದ್ದೆ, ಪ್ರಮುಖರಾದ ಪುಟ್ಟಣ ಗೌಡ ಪಿಜಕಳ, ಚಂದ್ರಶೇಖರ ಗೌಡ ಕೋಡಿಬೈಲು, ಅಚ್ಯುತ ಗೌಡ ಕುದ್ರೋಳಿ, ಅಶ್ರಫ್ ಶೇಡಿಗುಂಡಿ, ಸತೀಶ್ಚಂದ್ರ ಕೇವಳ, ಸತೀಶ್ ನಾೖಕ್ ಮೇಲಿನಮನೆ, ಧರಣೇಂದ್ರ ಜೈನ್, ಶಿವರಾಮ ಎಂ.ಎಸ್., ಎಲ್ಯಣ್ಣ ಗೌಡ, ವೆಂಕಟ್ರಮಣ ಗೌಡ ಕಳಿಗೆ, ನೇಮ ಸಮಿತಿಯ ಅಧ್ಯಕ್ಷ ಗಣಪಯ್ಯ ಗೌಡ ಅಂಙಣ, ಉಪಾಧ್ಯಕ್ಷರಾದ ಅಚ್ಯುತ ಗೌಡ ಅಂಙಣ ಹರಿಹರ, ಸುಂದರ ಗೌಡ ಅಂಙಣ, ಧರ್ಮಪಾಲ ಗೌಡ ಅಂಙಣ ಐನೆಕಿದು, ಕಾರ್ಯದರ್ಶಿ ನಾರಾಯಣ ಗೌಡ ಪಣೆಮಜಲು, ಜತೆ ಕಾರ್ಯದರ್ಶಿ ಹರಿಪ್ರಸಾದ್ ಪಣೆಮಜಲು, ಕೋಶಾಧಿಕಾರಿ ಕೇಶವ ಗೌಡ ಪಣೆಮಜಲು, ಸದಸ್ಯರಾದ ರಮೇಶ ಗೌಡ ತುಂಬೆತ್ತಡ್ಕ, ನೇಮಣ್ಣ ಗೌಡ ನಡುವಳಿಕೆ, ಚಿದಾನಂದ ಗೌಡ ದೇವುಪಾಲು, ಲಿಂಗಪ್ಪ ಗೌಡ ಕೆರೆಮುದೇಲು, ಹರಿಶ್ಚಂದ್ರ ಕುಜುಂಬಾರು, ಕೃಷ್ಣಪ್ಪ ಪೂಜಾರಿ ಬೈಲಂಗಡಿ, ಜನಾರ್ದನ ಗೌಡ ಪಣೆಮಜಲು, ಸೂರಪ್ಪ ಗೌಡ ಕೆರೆಮುದೇಲು ಉಪಸ್ಥಿತರಿದ್ದರು.