Home ಧಾರ್ಮಿಕ ಸುದ್ದಿ ಪಣೆಮಜಲು: ನಾಗದೇವರಿಗೆ ತಂಬಿಲ, ದೈವಗಳಿಗೆ ಅಗೇಲು

ಪಣೆಮಜಲು: ನಾಗದೇವರಿಗೆ ತಂಬಿಲ, ದೈವಗಳಿಗೆ ಅಗೇಲು

274
0
SHARE

ಕಡಬ : ಇಲ್ಲಿನ ಪಣೆಮಜಲು ಶ್ರೀ ಮಲೆ ಉಳ್ಳಾಕ್ಲು ಶ್ರೀ ಮಲೆ ಚಾಮುಂಡಿ, ಶ್ರೀ ಪುರುಷ ದೈವ ಸಪರಿವಾರ ದೈವಗಳು ಮತ್ತು ಕಡಬದ ಪಂಜುರ್ಲಿ ದೈವಗಳ ನೇಮದ ಪ್ರಯುಕ್ತ ಕೆಂಚಭಟ್ರೆ ಶ್ರೀ ಸುಬ್ರಹ್ಮಣ್ಯ ಬೈಪಾಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ ಪಣೆಮಜಲಿನಲ್ಲಿ ಶ್ರೀ ನಾಗದೇವರಿಗೆ ತಂಬಿಲದ ಬಳಿಕ ಕೆದಂಬಾಡಿಯಲ್ಲಿ ರಕ್ತೇಶ್ವರಿ, ಗುಳಿಗ ದೈವಗಳ ಸಾನ್ನಿಧ್ಯದಲ್ಲಿ ತಂಬಿಲ ನಡೆದು ಪ್ರಸಾದ ವಿತರಣೆ ನಡೆಯಿತು.

ಬಳಿಕ ಶ್ರೀ ಉಳ್ಳಾಕ್ಲು ಉದ್ಭವ ಸ್ಥಳ ಕಲ್ಮಲ ಗುಡ್ಡೆಯಲ್ಲಿ ಶ್ರೀ ದೈವಗಳಿಗೆ ಪೇರಾರಿ ಇಟ್ಟು ಪ್ರಾರ್ಥನೆ ನಡೆಯಿತು. ತುಂಬೆತ್ತಡ್ಕದಲ್ಲಿ ಶ್ರೀ ಪುರುಷದೈವ, ಜುನ್ರೋಳು ಹಾಗೂ ಗುರುಕಾರ್ನ ಅವರಿಗೆ ಅಗೇಲು ಹಾಕಲಾಯಿತು. ಪಣೆಮಜಲು ಸನ್ನಿಧಿಯ ಮುಖ್ಯಸ್ಥ ಜನಾರ್ದನ ಗೌಡ ಪಣೆಮಜಲು, ನೇಮೋತ್ಸವ ಸಮಿತಿಯ ಅಧ್ಯಕ್ಷ ಗಣಪಯ್ಯ ಗೌಡ ಅಂಙಣ, ರೋಹಿತ್‌ ಪಣೆಮಜಲು, ಸಮಿತಿಯ ಉಪಾಧ್ಯಕ್ಷರಾದ ಲಕ್ಷ್ಮಣ ಗೌಡ ಅಂಙಣ ಹರಿಹರ, ಮಾಜಿ ಸೈನಿಕ ಸುಂದರ ಗೌಡ ಅಂಙಣ, ಧರ್ಮಾಪಾಲ ಗೌಡ ಅಂಙಣ ಐನೆಕಿದು, ಕಾರ್ಯದರ್ಶಿ ನಾರಾಯಣ ಗೌಡ ಪಣೆಮಜಲು, ಜತೆ ಕಾರ್ಯದರ್ಶಿ ಹರಿಪ್ರಸಾದ್‌ ಪಣೆಮಜಲು, ಖಜಾಂಚಿ ಕೇಶವ ಗೌಡ ಪಣೆಮಜಲು, ಸದಸ್ಯರಾದ ರಮೇಶ್‌ ಗೌಡ ತುಂಬೆತ್ತಡ್ಕ, ಹರಿಶ್ಚಂದ್ರ ಕುಜುಂಬಾರು, ಕೃಷ್ಣಪ್ಪ ಪೂಜಾರಿ ಬೈಲಂಗಡಿ, ಶೂರಪ್ಪ ಗೌಡ ಕೆರೆಮುದೇಲು, ಜನಾರ್ದನ ಗೌಡ (ಮೆಕ್ಯಾನಿಕ್‌), ಪಣೆಮಜಲು, ಬಾಲಣ್ಣ ಗೌಡ ಪಣೆಮಜಲು, ಶೇಖರ ಗೌಡ ಅಂಙಣ, ನಾರ್ಣಪ್ಪ ಗೌಡ ಪಣೆಮಜಲು, ಸುಂದರ ಗೌಡ ಪಣೆಮಜಲು ಉಪಸ್ಥಿತರಿದ್ದರು. ದೈವದ ಪರಿಚಾರಕರಾದ ಜತ್ತಪ್ಪ ಗೌಡ ಪಣೆಮಜಲು, ರಾಮಣ್ಣ ಗೌಡ ಮುಂಡ್ರೋಟು, ನಾರಾಯಣ ಗೌಡ ಪಣೆಮಜಲು, ವಿಶ್ವನಾಥ ಗೌಡ ಪಣೆಮಜಲು, ಶಶಿಧರ ಗೌಡ ಪಣೆಮಜಲು, ಬಾಬು ಮುಗೇರ ಏರಂತಿಲ, ತನಿಯ ಮುಗೇರ ಕಕ್ಕೆನಡ್ಕ, ಬಾಬು ಮುಗೇರ ಮಜ್ಜೆಗುಡ್ಡೆ, ಧರಣ್‌ ಅಜಿಲ ದೈವದ ಕಾರ್ಯದಲ್ಲಿ ಸಹಕರಿಸಿದರು.

ಇಂದಿನಿಂದ ನೇಮ
ಮಾ. 29ರಂದು ಸಂಜೆ ಶ್ರೀ ದೈವಗಳ ಭಂಡಾರ ಭಂಡಾರ ಚಾವಡಿಯಿಂದ ಇಳಿಸಿ ಮಾಲೆÂ ಮಾಡದಲ್ಲಿ ಭಂಡಾರ ಏರುವುದು, ರಾತ್ರಿ ಅನ್ನಸಂತರ್ಪಣೆ ಬಳಿಕ ಶ್ರೀ ಮಲೆ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳ ನೇಮ ಪ್ರಾರಂಭಗೊಳ್ಳಲಿದೆ. ಮಾ.30ರಂದು ಬೆಳಗ್ಗೆ ಶ್ರೀ ಮಲೆ ಚಾಮುಂಡಿ ಪ್ರಧಾನಿ ದೈವದ ನೇಮ ಮತ್ತು ಹರಕೆ ಸಲ್ಲಿಕೆ ಹಾಗೂ ಗಡಿಗೆ ಹೋಗುವ ಕಾರ್ಯ ನಡೆಯಲಿದೆ. ಮಧ್ಯಾಹ್ನ ಕಡಬದ ಪಂಜುರ್ಲಿ ದೈವದ ನೇಮ, ಅಪರಾಹ್ನ ನೇಮ ಮುಗಿದು ಭಂಡಾರವು ಭಂಡಾರ ಚಾವಡಿಗೆ ಹಿಂತಿರುಗುವುದು.

LEAVE A REPLY

Please enter your comment!
Please enter your name here