ಸುಬ್ರಹ್ಮಣ್ಯ: ಬಳ್ಪ ಗ್ರಾಮದ ಪಂಡಿಕಜೆ ಶ್ರೀ ಹೊಸಮ್ಮ ದೈವಸ್ಥಾನದಲ್ಲಿ ಶ್ರೀ ಹೊಸಮ್ಮನವರ ನೇಮ ನಡೆಯಿತು.
ಮುಂಜಾನೆಯಿಂದ ಪ್ರಾರ್ಥನೆ, ಸಂಕಲ್ಪ, ಸ್ವಸ್ತಿ ಣ್ಯಾಹವಾಚನ, ದ್ವಾದಶ ನಾಳಿಕೇರ ಗಣಯಾಗ, ಸತ್ಯನಾರಾಯಣ ಪೂಜೆ, ಮಹಾಪರ್ವ, ಬೀದಿಗುಡ್ಡೆ ಶ್ರೀ ಸಿದ್ಧಿವಿನಾಯಕ ಭಜನ ಮಂಡಳಿಯಿಂದ ಭಜನೆ ಸಂಕೀರ್ತನೆ, ಅನ್ನಸಂತರ್ಪಣೆ, ರಾತ್ರಿ ಭಂಡಾರ ತೆಗೆದು ಅನ್ನಸಂತರ್ಪಣೆ ಜರಗಿತು. ಬಳಿಕ ಶ್ರೀ ಹೊಸಮ್ಮನವರ ನೇಮ ಜರಗಿತು.