ಬಂಟ್ವಾಳ : ಬಂಟ್ವಾಳ ಬೈಪಾಸ್ ನಿತ್ಯಾನಂದ ನಗರ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಟ್ರಸ್ಟಿನ ವತಿಯಿಂದ ನಿರ್ಮಾಣಗೊಳ್ಳಲಿರುವ ಗುರುದ್ವಯರ ಪಂಚಲೋಹ ವಿಗ್ರಹಕ್ಕೆ “ಲಕ್ಷ ಹಸ್ತ ಕಾಣಿಕೆ’ ಕಾರ್ಯಕ್ರಮಕ್ಕೆ ಕಾಂಞಂಗಾಡ್ ಶ್ರೀ ನಿತ್ಯಾನಂದ ಆಶ್ರಮದ ಗಣಪತಿ ಸ್ವಾಮೀಜಿ ಚಾಲನೆ ನೀಡಿ ಆಶೀರ್ವಚಿಸಿದರು.
ಮುಂಬಯಿ ಗಣೇಶಪುರಿಯಿಂದ ಕಾಸರಗೋಡಿನ ಕಾಂಞಂಗಾಡ್ ಸಹಿತ ಅವಿಭಜಿತ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಭಗವಾನ್ ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀಜಿ ಅವರ ಪಂಚಲೋಹದ ವಿಗ್ರಹ ನಿರ್ಮಿಸುತ್ತಿರುವುದು ಸ್ತುತ್ಯರ್ಹ ಎಂದರು.
ಪುರೋಹಿತ ಸತ್ಯನಾರಾಯಣ ಭಟ್ ಇಜ್ಜ ಪ್ರಸ್ತಾವಿಸಿ, ಸ್ವಾಮೀಜಿದ್ವಯರ ಪಂಚಲೋಹದ ವಿಗ್ರಹ ನಿರ್ಮಿಸುವ ಪುಣ್ಯ ಕಾರ್ಯದಲ್ಲಿ ಎಲ್ಲ ಭಕ್ತರು ಪಾಲ್ಗೊಳ್ಳುವ ನಿಟ್ಟಿನಲ್ಲಿ “ಲಕ್ಷ ಹಸ್ತ ಕಾಣಿಕೆ’ ಅಭಿಯಾನ ಆರಂಭಿಸಲಾಗಿದೆ ಎಂದರು.
ಪತ್ರಕರ್ತ ಕೀರ್ತಿರಾಜ್ ಧಾರ್ಮಿಕ ಉಪನ್ಯಾಸ ನೀಡಿ, ನಿರಾಡಂಬರ ಮೂರ್ತಿ ಸ್ವಾಮೀಜಿದ್ವಯರ ವಿಗ್ರಹ ನಿರ್ಮಾಣ ಮತ್ತು ಮಂದಿರ ಪುನರ್ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು. ಕಪೆ ಶ್ರೀ ನಿತ್ಯಾನಂದ ಗುರುಮಂದಿರ ಟ್ರಸ್ಟಿ ಸುಂದರ್ ಪೂಜಾರಿ ಶುಭ ಹಾರೈಸಿದರು. ಭಕ್ತರು ಹಸ್ತ ಕಾಣಿಕೆ ಅಭಿಯಾನದಲ್ಲಿ ಪಾಲ್ಗೊಂಡು ಕಾಣಿಕೆ ಸಲ್ಲಿಸಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಉದಯ ಕುಮಾರ್ ರಾವ್, ಅಧ್ಯಕ್ಷ ಬಿ. ಹರೀಶ್ ಶೆಟ್ಟಿ, ಟ್ರಸ್ಟಿನ ಗೌರವಾಧ್ಯಕ್ಷ ಸುರೇಶ್ ಕುಲಾಲ್, ಪದಾಧಿಕಾರಿಗಳು, ಬಂಟ್ವಾಳ
ಪುರಸಭೆ ಮಾಜಿ ಅಧ್ಯಕ್ಷರು, ಟ್ರಸ್ಟಿನ ಅಧ್ಯಕ್ಷ ಬಿ. ದಿನೇಶ್ ಭಂಡಾರಿ ಸ್ವಾಗತಿಸಿ, ಯೋಗಿಶ್ ಕುಲಾಲ್ ನಿರೂಪಿಸಿ, ವಂದಿಸಿದರು.