ಪಣಂಬೂರು: ಇಲ್ಲಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಂಸ್ಕೃ ತಿಕ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ವೇ| ಮೂ| ಕುಡುಪು ನರಸಿಂಹ ತಂತ್ರಿ ಅವರು ಉದ್ಘಾಟಿಸಿ ದೇವಸ್ಥಾನದಲ್ಲಿ ಪೂಜೆ, ಪುರಸ್ಕಾರಗಳೊಂದಿಗೆ ದೇವರಿಗೆ ಪ್ರಿಯವಾದ ನೃತ್ಯ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಆಯೋಜನೆ ಮಾಡಿರುವುದು ಉತ್ತಮ ವಿಚಾರ. ನವದಿನಗಳಲ್ಲಿಯೂ ಮನೋಲ್ಲಾಸ ತರುವ ಅತ್ಯುತ್ತಮ ಸಾಂಸ್ಕೃತಿಕ ವೈಭವ ಮೂಡಿಬರಲಿ ಎಂದರು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಿ. ಸದಾನಂದ ಎಸ್., ಶ್ರೀಧರ ಐತಾಳ್, ಸಂತೋಷ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು. ಶಿವರಾಂ ಪಣಂಬೂರು ನಿರೂಪಿಸಿದರು.