ಪಳ್ಳಿ: ಶ್ರೀ ರಾಜರಾಜೇಶ್ವರಿ ಸದ್ಗುರು ನಿತ್ಯಾನಂದ ಕ್ಷೇತ್ರ ನೆಲ್ಲಿ ನಿಟ್ಟೆಯಲ್ಲಿ ನವರಾತ್ರಿಯ ಪ್ರಯುಕ್ತ ಸುಮಂಗಲಿಯರಿಂದ ದೀಪ ಲಕ್ಷ್ಮೀ ಪೂಜೆ ನಡೆಯಿತು. ದುರ್ಗಾ ವಾಹಿನಿಯ ಪ್ರಾಂತ ಸಂಯೋಜಕಿ ವಿದ್ಯಾ ಮಲ್ಯ, ಮಂಗಳೂರ್ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಸುರೇಖಾ ರಾಜ್ ಪೂಜೆಯನ್ನು ನಡೆಸಿಕೊಟ್ಟರು.
ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರ ಸುನಿಲ್ ಕೆ. ಆರ್. ಮಾತನಾಡಿ, ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವುದು ಮಾನಸಿಕ ನೆಮ್ಮದಿ ಮತ್ತು ಆರೋಗ್ಯ. ಇದು ಸಿಗುವುದು ಕೇವಲ ದೇವರ ಧ್ಯಾನದಿಂದ. ನಾವೆಲ್ಲ ಈ ಸಮಾಜದಲ್ಲಿ ಸಂಘಟಿತರಾಗಿ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸೋಣ ಎಂದು ಹೇಳಿದರು.
ದೇವಸ್ಥಾನದ ಟ್ರಸ್ಟಿಗಳಾದ ಮಹಾಬಲ ಸುವರ್ಣ, ಕೆ.ಜಿ. ರಾಮಪ್ಪ, ಆಡಳಿತ ಮೊಕ್ತೇಸರರಾದ ಸುನಿಲ್ ಕೆ.ಆರ್., ಸುಧೀರ್, ಬಿಜೆಪಿಯ ಸ್ಥಳೀಯ ಸ್ಥಾನೀಯ ಸಮಿತಿ ಅಧ್ಯಕ್ಷ ರಂಜಿತ್ಅಮೀನ್, ಪಂಚಾಯತ್ ಸದಸ್ಯ ಸತೀಶ್ ಶೆಟ್ಟಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.