Home ಧಾರ್ಮಿಕ ಸುದ್ದಿ ಪಲ್ಲತ್ತಾರು ದೈವಸ್ಥಾನ: ಬ್ರಹ್ಮಕಲಶೋತ್ಸವ ಸಂಪನ್ನ

ಪಲ್ಲತ್ತಾರು ದೈವಸ್ಥಾನ: ಬ್ರಹ್ಮಕಲಶೋತ್ಸವ ಸಂಪನ್ನ

958
0
SHARE

ಬಡಗನ್ನೂರು: ಒಳಮೊಗ್ರು ಗ್ರಾಮದ ಪಲ್ಲತ್ತಾರು ಶ್ರೀ ಮಲೆಉಳ್ಳಾಕುಲು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜ. 9ರಂದು ನಡೆಯಿತು.

ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಗ್ಗೆ 10.21ರಿಂದ 10.55ರ ಕುಂಭಲಗ್ನದ ಶುಭ ಮುಹೂರ್ತದಲ್ಲಿ ನಾಗಪ್ರತಿಷ್ಠೆ, ದೈವಗಳಪ್ರತಿಷ್ಠೆ ನಡೆದು ಬ್ರಹ್ಮಕಲಶಾಭಿಷೇಕ ನಡೆದು ತಂಬಿಲ ಸೇವೆ ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಬೆಳಗ್ಗೆ ಮೊದಲಿಗೆ ಗಣಪತಿ ಹೋಮ, ಪ್ರತಿಷ್ಠಾ ಹೋಮ, ಆಶ್ಲೇಷ ಬಲಿ, ಬ್ರಹ್ಮಕಲಶ ಪೂಜೆ ನಡೆಯಿತು. ಜ. 8ರಂದು ರಾತ್ರಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಸ್ಥಳಶುದ್ಧಿ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ಬಲಿ, ನಾಗನ ಬಿಂಬಜಲಾಧಿವಾಸ, ಪ್ರಕಾರ ದಿಕ್ಬಲಿ ನಡೆದು ಪ್ರಸಾದ ವಿತರಣೆ ನಡೆಯಿತು. ಸುಮಾರು 2,500ಕ್ಕೂ ಅಧಿಕ ಭಕ್ತರು ದೇವರ ಪ್ರಸಾದ ಹಾಗೂ ಅನ್ನಪ್ರಸಾದ ಸ್ವೀಕರಿಸಿದರು.

ಆಡಳಿತ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜೆ.ಕೆ. ವಸಂತ ಗೌಡ ಉರ್ವ, ಅಧ್ಯಕ್ಷ ಸೀತಾರಾಮ ರೈ ಚೆಲ್ಯಡ್ಕ, ಆಡಳಿತ ಸಮಿತಿಯ ಪ್ರಧಾನ ಸಂಚಾಲಕ ರಾಜೇಶ್‌ ಪಲ್ಲತ್ತಾರು, ಅಧ್ಯಕ್ಷ ಪ್ರವೀಣ್‌ ಪೂಜಾರಿ ಪಲ್ಲತ್ತಾರು, ಪ್ರಧಾನ ಕಾರ್ಯದರ್ಶಿ ಸತೀಶ್‌ ನಾಯ್ಕ ಪಲ್ಲತ್ತಾರು, ಜೀರ್ಣೋದ್ಧಾರ ಸಮಿತಿಯ ಸಂಘಟನ ಕಾರ್ಯದರ್ಶಿ ಜಗನ್ನಾಥ ಪೂಜಾರಿ ಮುಡಾಲ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರೈ ಕುಂಬ್ರ, ಕಾರ್ಯಾಧ್ಯಕ್ಷ ಯತಿರಾಜ್‌ ರೈ ನೀರ್ಪಾಡಿ, ಪ್ರಧಾನ ಸಂಚಾಲಕ ಹರಿಪ್ರಸಾದ್‌ ಶೆಟ್ಟಿ ನೀರ್ಪಾಡಿ ಇಂತ್ರುಮೂಲೆ, ಕೋಶಾಧಿಕಾರಿ ತ್ರಿವೇಣಿ ಪ್ರವೀಣ್‌ ಪಲ್ಲತ್ತಾರು ಹಾಗೂ ಜೀರ್ಣೋದ್ಧಾರ ಸಮಿತಿಯವರು ಇದ್ದರು.

ಗಣ್ಯರ ಭೇಟಿ

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ, ನ್ಯಾಯವಾದಿ ಶಂಭು ಭಟ್, ತಾ.ಪಂ. ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭೇಟಿ ಕೊಟ್ಟರು.

ಪಲ್ಲತ್ತಾರುಕ್ಷೇತ್ರದ ಗೌರವ ಸಲಹೆಗಾರ ಕುಂಬ್ರದುರ್ಗಾಪ್ರಸಾದ್‌ ರೈ, ನಾರಾಯಣ ರೈ ಬಾರಿಕೆ, ವೆಂಕಪ್ಪಗೌಡ ಬೊಳ್ಳಾಡಿ, ಸುಧಾಕರ ರೈ ಕುಂಬ್ರ, ಎಂ.ಎಸ್‌.ಮುಕುಂದ ಶಾಂತಿವನ, ಹರೀಶ್‌ ಬಿಜತ್ರೆ, ಬಾಬು ಕೆ. ಪಲ್ಲತ್ತಾರು, ರಾಜೀವಿ ಎಸ್‌. ರೈ, ಪುರಂದರರೈ ಮಿತ್ರಂಪಾಡಿ, ಸ್ವಾಗತ ಸಮಿತಿಯ ಸಂಚಾಲಕ ವಸಂತಶೆಟ್ಟಿ ಕಲ್ಲಡ್ಕ, ಆರ್ಥಿಕ ಸಮಿತಿಯ ಸಂತೋಷ್‌ ಕುಮಾರ್‌ ಕೈಕಾರ, ಅತಿಥಿ ಸತ್ಕಾರ ಸಮಿತಿಯ ಸಂಚಾಲಕ ಸೀತಾರಾಮ ಶೆಟ್ಟಿ ಕಲ್ಲಡ್ಕ, ವೇದಿಕೆ ಸಮಿತಿಯ ಸಂಚಾಲಕ ಸಂತೋಷ್‌ ರೈ ಕೈಕಾರ, ಕಛೇರಿ ನಿರ್ವಹಣೆಯ ಸಂಚಾಲಕ ಅರುಣ್‌ ರೈ ಬಿಜಳ, ಸಹಸಂಚಾಲಕ ಜಗದೀಶ್‌ ಪಲ್ಲತ್ತಾರು, ಪ್ರಚಾರ ಸಮಿತಿಯ ನವೀನ್‌ ಕುರಿಂಜ, ವೈಧಿಕ ಸಮಿತಿಯ ಜಗನ್ನಾಥಪೂಜಾರಿ ಮುಡಾಲ, ಕಲಶ ವಿತರಣೆ ಸಮಿತಿಯ ರಾಧಾಕೃಷ್ಣ ರೈ ತುಂಡುಬೈಲು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here