ಬಡಗನ್ನೂರು : ಒಳಮೊಗ್ರು ಗ್ರಾಮದ ಪಲ್ಲತ್ತಾರು ಶ್ರೀ ಮಲೆ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಸಾನ್ನಿಧ್ಯದ ಜೀರ್ಣೋದ್ಧಾರ, ಬ್ರಹ್ಮಕಲ ಶೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ದೇಣಿಗೆಯ ಡಿಡಿಯನ್ನು ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ದನ್ ಎಸ್. ಅವರು ದೈವಸ್ಥಾನದ ಸಮಿತಿಗೆ ಹಸ್ತಾಂತರಿಸಿದ್ದಾರೆ.
ಪಲ್ಲತ್ತಾರು ಕ್ಷೇತ್ರದ ಆಡಳಿತ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಅಧ್ಯಕ್ಷ ಪ್ರವೀಣ್ ಪಲ್ಲತ್ತಾರು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜೆ.ಕೆ. ವಸಂತ ಗೌಡ ಉರ್ವ, ಅಧ್ಯಕ್ಷ ಸೀತಾರಾಮ ರೈ ಚೆಲ್ಯಡ್ಕ, ಆಡಳಿತ ಸಮಿತಿ ಸಂಚಾಲಕ ರಾಜೇಶ್ ಪಲ್ಲತ್ತಾರು, ಪ್ರ. ಕಾರ್ಯದರ್ಶಿ ಸತೀಶ್ ನಾಯ್ಕ ಪಲ್ಲತ್ತಾರು, ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ಶ್ರೀನಿವಾಸ ರೈ ಕುಂಬ್ರ, ಕಾರ್ಯಾಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಸಂಘಟನ ಕಾರ್ಯದರ್ಶಿ ಜಗನ್ನಾಥ ಪೂಜಾರಿ ಮುಡಾಲ, ಪ್ರ. ಸಂಚಾಲಕ ಹರಿಪ್ರಸಾದ್ ಶೆಟ್ಟಿ ನೀರ್ಪಾಡಿ ಇಂತ್ರುಮೂಲೆ, ಶನಿಪೂಜೆ ಸಮಿತಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಮಾಧವ ರೈ ಕುಂಬ್ರ, ವಲಯಾಧ್ಯಕ್ಷ ಸೀತಾರಾಮ ಇದ್ಯಪೆ, ಮೇಲ್ವಿಚಾರಕಿ ರೋಹಿಣಿ, ಸೇವಾ ಪ್ರತಿನಿಧಿ ತ್ರಿವೇಣಿ, ಆನಂದ ರೈ ಉಪಸ್ಥಿತರಿದ್ದರು.