ಬಡಗನ್ನೂರು : ಒಳಮೊಗ್ರು ಗ್ರಾಮದ ಪಲ್ಲತ್ತಾರು ಶ್ರೀ ಮಲೆಉಳ್ಳಾಕುಲು ಹಾಗೂ ಪರಿವಾರ ದೈವಗಳ ಹಾಗೂ ನಾಗಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ. 9ರಿಂದ ನಡೆಯಲಿದ್ದು, ರವಿವಾರ ಹಸುರು ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆ ನಡೆಯಿತು.
ದಭೆìತ್ತಡ್ಕದಲ್ಲಿ ಹರಿನಾರಾಯಣ ಭಟ್ ಮೆರವಣಿಗೆ ಉದ್ಘಾಟಿಸಿದರು. ಸಮಿತಿ ಪ್ರಧಾನ ಸಂಚಾಲಕ ರಾಜೇಶ್ ರೈ ಪರ್ಪುಂಜ, ಆಡಳಿತ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ರಾಜೇಶ್ ಪಲ್ಲತ್ತಾರು, ಪ್ರವೀಣ್ ಪೂಜಾರಿ ಪಲ್ಲತ್ತಾರು, ಸತೀಶ್ ನಾಯ್ಕ ಪಲ್ಲತ್ತಾರು, ಜಗನ್ನಾಥ ಪೂಜಾರಿ ಮುಡಾಲ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜೆ.ಕೆ. ವಸಂತ ಗೌಡ ಉರ್ವ, ಅಧ್ಯಕ್ಷ ಸೀತಾರಾಮ ರೈ ಚೆಲ್ಯಡ್ಕ, ಶ್ರೀನಿವಾಸ ರೈ ಕುಂಬ್ರ, ಯತಿರಾಜ್ ರೈ ನೀರ್ಪಾಡಿ, ಹರಿಪ್ರಸಾದ್ ಶೆಟ್ಟಿ ನೀರ್ಪಾಡಿ ಇಂತ್ರುಮೂಲೆ, ತ್ರಿವೇಣಿ ಪ್ರವೀಣ್ ಪಲ್ಲತ್ತಾರು ಹಾಗೂ ಸದಸ್ಯರು, ಹಸುರು ಹೊರೆಕಾಣಿಕೆ ಸಮಿತಿಯ ಮೋಹನ್ದಾಸ್ ರೈ ಕೊಡೆಂಚಾರು, ವೆಂಕಪ್ಪ ಪೂಜಾರಿ ದರ್ಬೆತ್ತಡ್ಕ, ಪ್ರಸಾದ್ ರೈ ನೀರ್ಪಾಡಿ, ನಾರಾಯಣ ಅಜಲಡ್ಕ, ಗಂಗಾಧರ ಆಳ್ವ, ಪುರಂದರ ರೈ ನಾಲ, ಅಮರನಾಥ ರೈ ಐಂಬಾಗಿಲು, ಸುಧಾಕರ ಆಳ್ವ, ಪ್ರಿತೀಶ್ ಗೌಡ, ವಿಶ್ವನಾಥ ರೈ ಕೋಡಿಬೈಲು, ಮೋಹನ್ ಗೌಡಬೊಳ್ಳಾಡಿ, ಶಿವರಾಮ ಗೌಡ ಬೊಳ್ಳಾಡಿ, ನಾರಾಯಣ ನಾಯ್ಕ, ಸತೀಶ್ ರೈ ಕಲ್ಲಡ್ಕ, ಚಂದ್ರಹಾಸ ಆಳ್ವ, ಶ್ರೀನಿವಾಸ ನಾಯ್ಕ ಉಪಸ್ಥಿತರಿದ್ದರು.
9ರಂದು ಪ್ರತಿಷ್ಠೆ, ಬ್ರಹ್ಮಕಲಶ
ಜ. 8ರ ಸಂಜೆ ಧಾರ್ಮಿಕ ಸಭೆ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದು, ನಿತ್ಯಾನಂದ ಮುಂಡೋಡಿ ಉದ್ಘಾಟಿಸಲಿ¨ªಾರೆ. ರಾತ್ರಿ ದೇವತಾ ಪ್ರಾರ್ಥನೆ, ಸ್ಥಳ ಶುದ್ಧಿ, ವಾಸ್ತು ಹೋಮ ನಡೆಯಲಿವೆ. ಜ. 9ರ ಬೆಳಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು 10.21ರಿಂದ 10.55ರ ಕುಂಭ ಲಗ್ನದ ಮುಹೂರ್ತದಲ್ಲಿ ನಾಗ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.