Home ಧಾರ್ಮಿಕ ಸುದ್ದಿ ಪಳ್ಳತ್ತಾರು: ಜುಮಾದಿ ದೈವದ ನೇಮ

ಪಳ್ಳತ್ತಾರು: ಜುಮಾದಿ ದೈವದ ನೇಮ

1535
0
SHARE

ಬಡಗನ್ನೂರು : ಒಳಮೊಗ್ರು ಗ್ರಾಮದ ಪನಡ್ಕ- ಪಳ್ಳತ್ತಾರು ಜುಮಾದಿ ದೈವಸ್ಥಾನದಲ್ಲಿ ಕಾಲಾವಧಿ ಮಾರಿ ಹಾಗೂ ಜುಮಾದಿ ದೈವದ ನೇಮ ಡಿ. 11 ಮತ್ತು 12ರಂದು ನಡೆಯಿತು.

ಮಂಗಳವಾರ ಪೂರ್ವಾಹ್ನ ಗಣಪತಿ ಹೋಮ ನಡೆಯಿತು. ರಾತ್ರಿ 8 ಗಂಟೆಗೆ ದೈವಗಳ ಭಂಡಾರ ಇಳಿಸಲಾಯಿತು. ರಾತ್ರಿ 9ರಿಂದ ಶ್ರೀ ಅಮ್ಮನವರಿಗೆ ಬಿಂದು ಸಮರ್ಪಣೆ ಸೇವೆ ನೆರವೇರಿತು. ಬುಧವಾರ ಪೂರ್ವಾಹ್ನ 9 ಗಂಟೆಗೆ ಜುಮಾದಿ ದೈವದ ನೇಮ, ಪ್ರಸಾದ ವಿತರಣೆ ಹಾಗೂ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ದೈವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ರೈ ಪನಡ್ಕ, ತಾ.ಪಂ. ಸದಸ್ಯ ಹರೀಶ್‌ ಬಿಜತ್ರೆ, ಒಳಮೊಗ್ರು ಗ್ರಾ.ಪಂ. ಸದಸ್ಯ ಶಶಿಕಿರಣ್‌ ರೈ ಕುಂಬ್ರ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಬಾಲಕೃಷ್ಣ ರೈ ಮೊಡಪ್ಪಾಡಿ, ರಮಾನಂದ ರೈ ನಡುಕುಮೆರು, ಚಂದ್ರಹಾಸ ರೈ, ಚಿದಾನಂದ ರೈ ಮೊಡಪ್ಪಾಡಿ, ನಾರಾಯಣ ರೈ, ಪುರಂದರ ರೈ ಗಂಗಾಧರ ಶೆಟ್ಟಿ ಪನಡ್ಕ, ಪ್ರೇಮನಾಥ ಶೆಟ್ಟಿ, ಅಮರನಾಥ ರೈ, ಸುಂದರ ರೈ, ದೈವದ ಪೂಜಾರಿ ಚಿಕ್ಕು ಪೂಜಾರಿ ಪಾಪೆಮಜಲು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here