Home ಧಾರ್ಮಿಕ ಸುದ್ದಿ ಪೂಪಾಡಿ ಕಟ್ಟೆ ಜೀರ್ಣೋದ್ಧಾರಕೆ ವಿಶೇಷ ಪ್ರಾರ್ಥನೆ

ಪೂಪಾಡಿ ಕಟ್ಟೆ ಜೀರ್ಣೋದ್ಧಾರಕೆ ವಿಶೇಷ ಪ್ರಾರ್ಥನೆ

1086
0
SHARE

ಪಡುಪಣಂಬೂರು : ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ದೇವರು ಷಷ್ಠಿಯ ಸಂದರ್ಭದಲ್ಲಿ ವಿಶೇಷ ಕಟ್ಟೆ ಪೂಜೆಯ ಸೇವೆಯನ್ನು ಪಡೆಯುವ ಇತಿಹಾಸ ಇರುವ ಕೆರೆಕಾಡು ಪೂಪಾಡಿ ಕಟ್ಟೆಯ ಜೀರ್ಣೋದ್ಧಾರಕ್ಕೆ ಕೆರೆಕಾಡಿನ ಶ್ರೀ ದುರ್ಗಾಪರಮೇಶ್ವರೀ ಭಜನ ಮಂದಿರದಲ್ಲಿ ವಿಶೇಷ ಪ್ರಾರ್ಥನೆಯನ್ನು ನಡೆಸಲಾಯಿತು.

ಮಂದಿರದ ಗೌರವಾಧ್ಯಕ್ಷ ಪಠೇಲ್‌ ವಾಸುದೇವ ರಾವ್‌ ಪುನರೂರು ಮಾತನಾಡಿ, ಗ್ರಾಮದ ಪುಣ್ಯಸ್ಥಾನಗಳಲ್ಲಿ ಪೂಪಾಡಿಕಟ್ಟೆಯೂ ಸಹ ಪವಿತ್ರವಾಗಿದ್ದು ಇರದ ಜೀರ್ಣೋದ್ದಾರಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಧಾರ್ಮಿಕವಾಗಿ ಶ್ರದ್ಧೆ ಭಕ್ತಿಯಿಂದ ಬೆಳೆದಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಉಳಿಸುವಂತಾಗುತ್ತದೆ ಎಂದರು.

ಮಂದಿರದ ಅರ್ಚಕ ರಾಘವೇಂದ್ರ ಭಟ್‌ ವಿಶೇಷ ಪ್ರಾರ್ಥನೆ ನಡೆಸಿದರು. ಕಟ್ಟೆ ಪೂಜೋತ್ಸವ ಸಮಿತಿಯ ಅಧ್ಯಕ್ಷ ಕರುಣಾಕರ್‌, ಮಂದಿರದ ಅಧ್ಯಕ್ಷ ಮನೋಹರ್‌ ಜಿ. ಕುಂದರ್‌, ಭಾಸ್ಕರ ಶೆಟ್ಟಿಗಾರ್‌, ಲಕ್ಷ್ಮಣ್‌ ಪೂಜಾರಿ, ಉಮೇಶ್‌ ದೇವಾಡಿಗ, ರಾಜೇಶ್‌ ಕುಮಾರ್‌ ಪಿ.ಆರ್‌., ಮಾಧವ ಶೆಟ್ಟಿಗಾರ್‌, ಶಿವಾನಂದ ಕೋಟ್ಯಾನ್‌, ಅನಂತ ಪದ್ಮನಾಭ, ಹರ್ಷ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here