ಪಡುವನ್ನೂರು : ಇಲ್ಲಿಯ ಶ್ರೀ ಪೂಮಾಣಿ-ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೇವಸ್ಥಾನದ ಪುನಃ ಪ್ರತಿಷಾ§ ಬ್ರಹ್ಮಕಲಶೋತ್ಸವದ ಅಂಗವಾಗಿ ಸನ್ನಿಧಿಯಲ್ಲಿ ನೂರ ಎಂಟು ತೆಂಗಿನ ಕಾಯಿ ಗಣಪತಿ ಹೋಮ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮುಂಜೆ ನಾಗೇಶ್ ತಂತ್ರಿ ಅವರ ಮಾರ್ಗದರ್ಶನದಲ್ಲಿ ಅರ್ಲಪದವು ವೇದಮೂರ್ತಿ ವಿಶ್ವೇಶ್ವರ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ- ವಿಧಾನ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಶ್ರೀ ಪೂಮಾಣಿ ಕಿನ್ನಿಮಾಣಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕೇಸರ ಸಂಜೀವ ರೈ ಕೆ.ಪಿ., ಗಣೇಶ್ ಭಟ್ ಬಿರ್ಣೋಡಿ, ಕೆ.ಸಿ. ಪಾಟಾಳಿ ಪಡುಮಲೆ, ಅರ್ಚಕ ಮಹಾಲಿಂಗ ಭಟ್, ಪುರಂದರ ರೈ ಕುದಾRಡಿ, ಜಯರಾಜ್ ಶೆಟ್ಟಿ ಅಣಿಲೆ, ಗುರುಪ್ರಸಾದ್ ರೈ ಕುದಾRಡಿ, ವಿಜಯಲಕ್ಷ್ಮೀ ಮೇಗಿನಮನೆ, ದೇವಿಪ್ರಸಾದ್ ಕೆ.ಸಿ., ದಯಾ ವಿ. ರೈ, ವಿಶ್ವನಾಥ ಪೂಜಾರಿ ಪೂಜಾರಿ, ಮೊದಲಾದವರು ಭಾಗವಹಿಸಿದ್ದರು.