Home ಧಾರ್ಮಿಕ ಸುದ್ದಿ ಪಡುಮಲೆ: ದೈವಸ್ಥಾನ ಜೀರ್ಣೋದ್ಧಾರಕ್ಕೆ ಜುಮಾ ಮಸೀದಿ ಸಮಿತಿ ನೆರವು

ಪಡುಮಲೆ: ದೈವಸ್ಥಾನ ಜೀರ್ಣೋದ್ಧಾರಕ್ಕೆ ಜುಮಾ ಮಸೀದಿ ಸಮಿತಿ ನೆರವು

1772
0
SHARE
ದೈವಸ್ಥಾನಕ್ಕೆ ಪಡುಮಲೆಯ ಜುಮಾ ಮಸೀದಿ ಕಮಿಟಿ ಸದಸ್ಯರು ನೆರವು ನೀಡಿದರು.

ಬಡಗನ್ನೂರು: ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ (ಉಳ್ಳಾಕುಲು), ವ್ಯಾಘ್ರ ಚಾಮುಂಡಿ (ರಾಜನ್‌ ದೈವ) ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಫೆ. 23ರಿಂದ 25ರ ತನಕ ನಡೆಯುವ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಕಾರ್ಯಕ್ಕೆ ಪಡುಮಲೆಯ ಜುಮಾ ಮಸೀದಿ ಕಮಿಟಿ 40,011 ರೂ. ನೆರವು ನೀಡಿ, ಸೌಹಾರ್ದ ಸಾರಿದೆ.

ಪಡುಮಲೆ ಮಸೀದಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ ಬಡಗನ್ನೂರು, ಮಸೀದಿಯ ಧರ್ಮಗುರು ಸಂಶುದ್ದೀನ್‌ ದಾರಿಮಿ, ಮಸೀದಿಯ ಉಪಾಧ್ಯಕ್ಷ ಫ‌ಕ್ರುದ್ದೀನ್‌, ಕೋಶಾಧಿಕಾರಿ ಆದಂಡೆಂಬಾಳೆ, ಕಾರ್ಯದರ್ಶಿ ಪಿ.ಬಿ. ಇಬ್ರಾಹಿಂ ಕೊಯಿಲ, ಕಮಿಟಿ ಸದಸ್ಯರಾದ ಆಲಿ ಕುಂಞಿ ಪಿಲಿಪುಡಿ, ಸೀದಿ ಕೊಯಿಲ ಮತ್ತಿತರರು ದೈವಸ್ಥಾನಕ್ಕೆ ತೆರಳಿ ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವಿರಾಜ್‌ ಶೆಟ್ಟಿ ಅಣಿಲೆ ಅವರ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಆರ್ಥಿಕ ನೆರವು ನೀಡಿದರು.

ಪದಾಧಿಕಾರಿಗಳಾದ ರವಿರಾಜ್‌ ರೈ ಸಜಂಕಾಡಿ, ಜನಾರ್ದನ ಪೂಜಾರಿ ಪದಡ್ಕ, ದೇವಿಪ್ರಸಾದ್‌ ಕೆಸಿ, ಜಯರಾಜ್‌ ಶೆಟ್ಟಿ ಅಣಿಲೆ, ಪುರಂದರ ರೈ ಕುದ್ಕಾಡಿ, ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here