ಬಡಗನ್ನೂರು : ಪೂಮಾಣಿ- ಕಿನ್ನಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನ ಪಡುಮಲೆ ಇಲ್ಲಿ ತುಲಾ ಸಂಕ್ರಮಣದಂದು ಬ್ರಹ್ಮಶ್ರೀ ನಾಗೇಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ದೈವಕ್ಕೆ ನವಾನ್ನ (ಪುದ್ವಾರ್ ಮೆಚ್ಚಿ) ಹಾಗೂ ವ್ಯಾಘ್ರ ಚಾಮುಂಡಿ (ರಾಜನ್) ದೈವದ ನೇಮವು ಅ. 17ರಂದು ಬದಿನಾರು ದೈವಸ್ಥಾನದಲ್ಲಿ ನಡೆಯಿತು.
ಪೂರ್ವಾಹ್ನ 7 ಗಂಟೆಗೆ ಗಣಪತಿ ಹೋಮ, 9ರಿಂದ ಉಳ್ಳಾಕುಲು ಹಾಗೂ ರಾಜನ್ ದೈವಗಳಿಗೆ ತಂಬಿಲ ಸೇವೆ ನಡೆಯಿತು. 10ರಿಂದ ಪುದ್ವಾರ್ ಮೆಚ್ಚಿ ನೇಮ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಪೂಜಾ ವಿಧಿ – ವಿಧಾನಗಳನ್ನು ನೆರವೇರಿಸಿದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವಿರಾಜ ರೈ ಅಣಿಲೆ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂಜೀವ ರೈ ಕೆ.ಪಿ., ಶ್ರೀ ಪೂಮಾಣಿ ಕಿನ್ನಮಾಣಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಬಡಗನ್ನೂರು ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಯ, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಗುರುಪ್ರಸಾದ್ ರೈ ಕುದಾRಡಿ, ಗೋಪಾಲಕೃಷ್ಣ ಸುಳ್ಯಪದಪು, ಪ್ರಗತಿಪರ ಕೃಷಿಕ ಜಯಂತ ರೈ ಕುದಾRಡಿ, ಭರತೇಶ್ ರೈ ಮೂಡಾಯೂರು, ಕೆ.ಸಿ. ಪಾಟಾಳಿ ಪಡುಮಲೆ, ಪುರಂದರ ರೈ ಕುದಾRಡಿ, ಸಂತೋಷ್ ಆಳ್ವ ಗಿರಿಮನೆ, ಮಣಿತ್ ರೈ ಕುದಾRಡಿ, ಜಯರಾಜ್ ಶೆಟ್ಟಿ ಅಣಿಲೆ, ದೇವಿಪ್ರಸಾದ ಕೆ.ಸಿ., ವಿಶ್ವನಾಥ ಪೂಜಾರಿ ಪೂಜಾರಿಮೂಲೆ, ರಾಮಣ್ಣ ಗೌಡ ಕರ್ಪುಡಿಕಾನ, ಶಶಿಧರ ರೈ ಕುತ್ಯಾಳ, ಶ್ರೀಧರ ನಾಯ್ಕ ನೆರ್ಲಪ್ಪಾಡಿ ಹಾಗೂ ಭಕ್ತರು ಉಪಸ್ಥಿತರಿದ್ದರು.