ಪಡುವನ್ನೂರು : ಪಡುಮಲೆ ಶ್ರೀ ಪೂಮಾಣಿ – ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ವಿಷು ಸಂಕ್ರಮಣದ ಅಂಗವಾಗಿ ತಂಬಿಲ ಸೇವೆ ಎ. 14ರಂದು ನಡೆಯಿತು. ಬೆಳಗ್ಗೆ ಮಹಾ ಗಣಪತಿ ಹೋಮ ನಡೆಯಿತು. ಬಳಿಕ ಶ್ರೀ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲ ಯದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಪೂಜಾ ವಿಧಿ-ವಿಧಾನ ನೆರವೇರಿಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ಸದಸ್ಯರಾದ ರವಿರಾಜ ರೈ ಸಜಂಕಾಡಿ, ದಯಾ ವಿ. ರೈ, ಶಶಿಧರ ರೈ ಕುತ್ಯಾಳ, ಚಿದಾನಂದ ಗೌಡ ಸಾರಕೂಟೇಲು, ಸ್ಥಳೀಯರಾದ ಪುರಂದರ ರೈ ಕುದಾRಡಿ, ಬಾಬು ರೈ ಮೂಡಾಯೂರು, ಕೆಸಿ ಪಾಟಾಳಿ ಪಡುಮಲೆ, ಭಾಸ್ಕರ ರಾವ್ ರತ್ನಮಾನಸ ಪಡುಮಲೆ, ಸಂಜೀವ ಗೌಡ ಪಟ್ಲಡ್ಕ, ಶ್ರೀನಿವಾಸ ಗೌಡ ಕನ್ನಯ, ದೇವಿ ಪ್ರಸಾದ್ ಕೆ.ಸಿ., ಕಲಾವತಿ ಗೌಡ ಪಟ್ಲಡ್ಕ, ರಘನಾಥ ರೈ ಕೊಯಿಲ, ಸಂಜೀವ ಸಾಲ್ಯಾನ್, ಸತೀಶ್ ಗೌಡ ಹಾಗೂ ಭಕ್ತರು ಭಾಗವಹಿಸಿದರು.