ಬಡಗನ್ನೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿಯಾಗಿ ಸಾರ್ವಜನಿಕ ವಿಶೇಷ ರಂಗಪೂಜೆ ಹಾಗೂ ಐಕ್ಯಮತ್ಯ ಹೋಮ ಫೆ. 15ರಂದು ದೇಗುಲದಲ್ಲಿ ನಡೆಯಿತು.
ಜೀರ್ಣೋದ್ಧಾರ ಪೂರ್ವಭಾವಿಯಾಗಿ ಶ್ರೀ ದೇವರ ಸಾನ್ನಿಧ್ಯ ವೃದ್ಧಿಗಾಗಿ ಹಾಗೂ ಊರಿನ ಜನತೆಯ ರಕ್ಷಾರ್ಥ ಮತ್ತು ಕ್ಷೇಮಕ್ಕಾಗಿ ಭಾದಮೂರ್ತಿಗಳ ಸಂತುಷ್ಟಿಗಾಗಿ ವಿಶೇಷ ರಂಗಪೂಜೆ ಐಕ್ಯಮತ್ಯ ಹೋಮ ನಡೆಸಬೇಕು ಎಂದು ಶ್ರೀ ದೇಗುಲದ ಚಿಂತನೆಯಲ್ಲಿ ಕಂಡುಬಂದಿತ್ತು.
ಅದರಂತೆ ಫೆ. 14ರ ರಾತ್ರಿ ವಿಶೇಷ ರಂಗಪೂಜೆ ಹಾಗೂ 15ರಂದು ಐಕ್ಯಮತ್ಯ ಹೋಮವು ಕ್ಷೇತ್ರದ ಪವಿತ್ರಪಾಣಿ ಕೊವೆತೋಟ ಕೇಶವ ಭಟ್ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವಿಶ್ವೇಶ್ವರ ಭಟ್ ನೇತೃತ್ವದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂಜೀವ ರೈ ಕೆ.ಪಿ., ಸದಸ್ಯರಾದ ಪದ್ಮಾವತಿ ನಾರಾಯಣ ಪೂಜಾರಿ ಮುಡಿಪಿನಡ್ಕ, ಶೋಭಾವತಿ ತ್ಯಾಂಪಣ್ಣ ಸಿ.ಎಚ್., ಅರ್ಚಕ
ಮಹಾಲಿಂಗ ಭಟ್, ಶ್ರೀನಿವಾಸ್ ಭಟ್ ಸಿ.ಎಚ್., ಈಶ್ವರ ಭಟ್ ಈಶಮೂಲೆ, ಲಕ್ಷ್ಮೀನಾರಾಯಣ ರಾವ್ ಮಾನಸ, ಕೆ.ಸಿ. ಪಾಟಾಳಿ ಪಡುಮಲೆ, ಗಣೇಶ ಭಟ್ ಈಶಮೂಲೆ, ಶಿವರಾಮ ರೈ ಮೈಂದನಡ್ಕ, ಉದಯ ಕುಮಾರ್ ಪಡುಮಲೆ, ಸುಬ್ರಹ್ಮಣ್ಯ ಭಟ್ ಪಾದೆಕರ್ಯ, ಶ್ರೀಪತಿ ಭಟ್, ಪುರಂದರ ರೈ ಕುದ್ರಾಡಿ ಹಾಗೂ ಭಕ್ತರು ಭಾಗವಹಿಸಿದ್ದರು.