Home ಧಾರ್ಮಿಕ ಸುದ್ದಿ ಪಡುಮಲೆ: ಪೂಮಾಣಿ ದೈವದ ನೇಮ

ಪಡುಮಲೆ: ಪೂಮಾಣಿ ದೈವದ ನೇಮ

1336
0
SHARE

ಪಡುವನ್ನೂರು: ಶ್ರೀ ಕ್ಷೇತ್ರ ಪಡುಮಲೆ ಜಾತ್ರೆ ಅಂಗವಾಗಿ ಪಡುಮಲೆ ಬದಿನಾರು ಪೂಮಾಣಿ -ಕಿನ್ನಿಮಾಣಿ ದೇವಸ್ಥಾನದಲ್ಲಿ ಪೂರ್ವಾಹ್ನ 11ಕ್ಕೆ ಪೂಮಾಣಿ ದೈವದ ನೇಮ ನಡೆಯಿತು. ದೈವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂಜೀವ ರೈ ಕೆ.ಪಿ., ಸದಸ್ಯರಾದ ರವಿರಾಜ ರೈ ಸಜಂಕಾಡಿ, ಶಶಿಧರ ರೈ ಕುತ್ಯಾಳ, ಗಣೇಶ್‌ ಭಟ್ ಬಿರ್ನೋಡಿ, ದಯಾ ವಿ. ರೈ ಬೆಳ್ಳಿಪ್ಪಾಡಿ, ಪ್ರೇಮಾ ಕುದ್ಕಾಡಿ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ, ಶ್ರೀಧರ ನೆರ್ಲಪಾಡಿ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಮೊಕ್ತೇಸರ ಸಂಜೀವ ರೈ ಕೆ.ಪಿ , ಅರ್ಚಕ ಮಹಾಲಿಂಗ ಭಟ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೇಶವ ಗೌಡ ಕನ್ನಯ, ವಿಷ್ಣು ಭಟ್ ಪಾದೆಕರ್ಯ, ಪದ್ಮಾವತಿ, ಮುಡಿಪಿನಡ್ಕ, ಶೋಭಾ ಪೈರ್ಪುಣಿ, ಗುರುಪ್ರಸಾದ್‌ ರೈ ಕುತ್ಯಾಡಿ, ವಿಜಯ ಕುಮಾರ್‌ ಸೋಣಂಗೇರಿ ತಿಲೋತ್ತಮ ರೈ ಬೆಳ್ಳಿಪ್ಪಾಡಿ, ಕೆ.ಸಿ. ಪಾಟಾಳಿ ಪಡುಮಲೆ, ರಾಕೇಶ್‌ ರೈ ಕುದ್ಕಾಡಿ, ದೇವಿಪ್ರಸಾದ್‌ ಕೆ.ಸಿ., ಶ್ರೀನಿವಾಸ ಭಟ್ ಚಂದುಕುಡ್ಲು, ರಾಮಣ್ಣ ಗೌಡ ಬಸವನ ಹಿತ್ತಿಲು, ಗಣೇಶ್‌ ಭಟ್ ಈಶಮೂಲೆ, ರಾಮಣ್ಣ ಗೌಡ ಕರ್ಪುಡಿಕಾನ ಹಾಗೂ ಗ್ರಾಮಸ್ಥರು ಭಾಗವಹಿಸಿದರು.

ಇಂದು ಪಡುಮಲೆ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದಲ್ಲಿ ಜ. 18ರಂದು ಪೂರ್ವಾಹ್ನ 7ರಿಂದ ಬೆಳ್ಳಿಪ್ಪಾಡಿ ಪಡುಮಲೆ ಮನೆ ಯಿಂದ ಮಲರಾಯ ದೈವದ ಭಂಡಾರ ಬಂದು, ಮಲರಾಯ ದೈವದ ನೇಮ, 11ರಿಂದ ವ್ಯಾಘ್ರ ಚಾಮುಂಡಿ (ರಾಜನ್‌) ದೈವದ ನೇಮ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ. ಸಂಜೆ 5ರಿಂದ ಕನ್ನಡ್ಕ ತರವಾಡಿನ ದೈವಸ್ಥಾನದಿಂದ ರುದ್ರ ಚಾಮುಂಡಿ ದೈವದ ಭಂಡಾರ ಬರುವುದು, ರಾತ್ರಿ 7.30ರಿಂದ ಕರ್ಪುಡಿಕಾನ ದೊಡ್ಡಮನೆಗೆ ಅವಭೃಥ ಸ್ನಾನಕ್ಕೆ ಹೊರಡುವುದು, ಕಟ್ಟೆ ಪೂಜೆ, ಧ್ವಜಾವರೋಹಣ, ರುದ್ರಾಂಡಿ ದೈವದ ನೇಮ, ನವಕಾಭಿಷೇಕ,ಮಂತ್ರಾಕ್ಷತೆ, ರಾತ್ರಿ 12ರಿಂದ ಗುಳಿಗ ದೈವದ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here